Pakistan : ಲಾಡೆನ್ ಹತ್ಯೆಯ ಬಳಿಕ ಆತನ ಹೆಂಡತಿಯರನ್ನು ಪಾಕಿಸ್ತಾನ ಮಾಡಿದ್ದೇನು?

Share the Article

Pakistan : 2011 ಮೇ 2 ರಂದು ಇಡೀ ಜಗತ್ತು ಎಂದೂ ಮರೆಯಲಾಗದ ಕಾರ್ಯಾಚರಣೆಯೊಂದಕ್ಕೆ ಸಾಕ್ಷಿಯಾಗಿತ್ತು. ಅದನ್ನು ಜಗತ್ತಿನ ಅತಿ ದೊಡ್ಡ ಕಾರ್ಯಾಚರಣೆ ಎಂದೇ ಕರೆಯಲಾಗುತ್ತದೆ. ಅದುವೆವೇ ಪಾಕಿಸ್ತಾನದಲ್ಲಿ ಅಡಗಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಒಸಾಮಾ ಬಿನ್ ಲಾಡೆನ್‌ ಎಂಬಾತನನ್ನು ಅಮೆರಿಕದ ಸೇನೆ ಹೊಡೆದುರುಳಿಸಿದ್ದು. ಹಾಗಾದರೆ ಲಾಡೆನ್ ಹತ್ಯೆಯ ಬಳಿಕ ಆತನ ಕುಟುಂಬಸ್ಥರು ಏನಾದರು?

ಯಸ್, ಲಾಡೆನ್ ಸಾವಿನ ಬಳಿಕ ಒಸಾಮಾ ಬಿನ್ ಲಾಡೆನ್ ಕುಟುಂಬಸ್ಥರು ಏನಾದ್ರು? ಅವರ ಪತ್ನಿಯರೊಂದಿಗೆ ಪಾಕಿಸ್ತಾನ ನಡೆದುಕೊಂಡಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳು ಸಿಕ್ಕಿರಲಿಲ್ಲ. ಇತ್ತೀಚೆಗೆ The Zardari Presidency: Now It Must Be Told ಹೆಸರಿನ ಪುಸ್ತಕ ಬಿಡುಗಡೆಯಾಗಿದ್ದು, ಇದನ್ನು ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಅಸಿಪ್ ಅಲಿ ಜರ್ದಾರಿ ಅವರ ಪ್ರವಕರ್ತ, ಆಪ್ತರಾಗಿ ಗುರುತಿಸಿಕೊಂಡಿದ್ದ ಫರ್ಹತುಲ್ಲಾಹ ಬಾಬರ್ ಬರೆದಿದ್ದಾರೆ. ಈ ಪುಸ್ತಕದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿವೆ.

ಇದನ್ನೂ ಓದಿ:INCOME TAX: ಇಲ್ಲಿಯವರೆಗೆ ಎಷ್ಟು ಕೋಟಿ ಐಟಿಆರ್‌ಗಳು ಸಲ್ಲಿಕೆಯಾಗಿದೆ? : ಕೊನೇ ಕ್ಷಣದಲ್ಲಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ

ಬಿನ್ ಲಾಡೆನ್ ಹತ್ಯೆ ಬಳಿಕ ಪಾಕಿಸ್ತಾನದ ಅಧಿಕಾರಿಗಳು ಆತನ ಪತ್ನಿಯರನ್ನು ವಶಕ್ಕೆ ಪಡೆದುಕೊಂಡಿದ್ದರು. ಅಚ್ಚರಿಯ ವಿಷಯ ಏನು ಅಂದ್ರೆ ಕೆಲವು ದಿನಗಳ ಬಳಿಕ CIA ತಂಡ ಎಬೊಟಾಬದ್ ಕಂಟೋಮೆಂಟ್ ತಲುಪಿತ್ತು. ಈ ತಂಡಕ್ಕೆ ಮಹಿಳೆಯರನ್ನು ವಿಚಾರಣೆ ನಡೆಸಲು ಅನುಮತಿ ನೀಡಲಾಯ್ತು. ಈ ಘಟನೆ ಪಾಕಿಸ್ತಾನದ ಸಾರ್ವಭೌಮತ್ವದ ಬಗ್ಗೆ ಕಳವಳವನ್ನುಂಟು ಮಾಡಿತ್ತು. ಇದು ಪಾಕಿಸ್ತಾನದ ರಾಷ್ಟ್ರೀಯ ಗೌರವ ಅವಮಾನ ಮಾಡಿದಂತಾಗಿತ್ತು ಎಂದು ಹೇಳಲಾಗುತ್ತದೆ.

Comments are closed.