Home News YouTube: ಇನ್ಮುಂದೆ ‘ಯೂಟ್ಯೂಬ್ ಚಾನೆಲ್’ ಆರಂಭಕ್ಕೆ ‘ಲೈಸೆನ್ಸ್’ ಕಡ್ಡಾಯ!?

YouTube: ಇನ್ಮುಂದೆ ‘ಯೂಟ್ಯೂಬ್ ಚಾನೆಲ್’ ಆರಂಭಕ್ಕೆ ‘ಲೈಸೆನ್ಸ್’ ಕಡ್ಡಾಯ!?

Hindu neighbor gifts plot of land

Hindu neighbour gifts land to Muslim journalist

YouTube: ಇದುವರೆಗೆ ಬೀದಿ ಬೀದಿಯಲ್ಲಿ ಯೂಟ್ಯೂಬರ್ ಗಳು ಹುಟ್ಟಿಕೊಂಡಿರುತ್ತಿದ್ದರು. ಆದ್ರೆ ಇನ್ಮುಂದೆ ‘ಯೂಟ್ಯೂಬ್ ಚಾನೆಲ್’ (YouTube) ಆರಂಭಕ್ಕೆಗೊಳಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಕರ್ನಾಟಕ (karnataka) ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಅನ್ನು ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದ, ಸಿಎಂ ಸಿದ್ದರಾಮಯ್ಯ ಅವರು, ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಸೋಷಿಯಲ್ ಮೀಡಿಯಾ ದಲ್ಲಿಯು ನನ್ನ ಬಗ್ಗೆ ಹೀಗೇ ಬರೆಯಿರಿ ಯಾವತ್ತೂ ಹೇಳಿಲ್ಲ. ಆದರೆ ಸತತವಾಗಿ ಸುಳ್ಳನ್ನೇ ತೋರಿಸಲಾಗಿದೆ. ತಿರುಚಿ ಬರೆಯಲಾಗಿದೆ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ. ಉದಾಹರಣೆಗೆ ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದೇ ದೊಡ್ಡ ವಿಷಯದಂತೆ ಮಾಧ್ಯಮಗಳಲ್ಲಿ ಚರ್ಚೆ ನಡೆಯಿತು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ಮಾಧ್ಯಮದಲ್ಲಿ ಹೀಗೆಲ್ಲಾ ತೋರಿಸಿದರೆ ಜನ ಒಪ್ಪುತ್ತಾರಾ ಎಂದು ಯೋಚನೆ ಮಾಡಬೇಕು.

ಇದನ್ನೂ ಓದಿ:Centenarians: ಇಲ್ಲಿ ಸುಮಾರು 1,00,000 ಶತಾಯುಷಿಗಳಿದ್ದಾರೆ: ಅದರಲ್ಲಿ 88% ಮಹಿಳೆಯರು : ಇವರ ದೀರ್ಘಾಯುಷ್ಯದ ಗುಟ್ಟೇನು?

ಅಭಿವ್ಯಕ್ತಿ ಸ್ವಾತಂತ್ರ್ಯ ಎತ್ತಿಹಿಡಿಯಲು ನಮ್ಮ ಸರ್ಕಾರ ಸದಾ ಸಿದ್ಧ. ದೌರ್ಜನ್ಯ ಮತ್ತು ಕೀಳು ಮಟ್ಟದ ವರ್ತನೆ ಮಾಡುತ್ತಿರುವ ಯು ಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಹಾನಿಕರ ಆಗಿದ್ದು, ಯು ಟ್ಯೂಬ್ ಚಾನಲ್ ಗಳ ಪ್ರಭಾವ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘವು ಬೇಡಿಕೆ ಸಲ್ಲಿಸಿದೆ. ಈ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.