UPI: ಮೊಬೈಲ್ನಿಂದಲೇ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್ಡ್ರಾ ಸೌಲಭ್ಯ

UPI: ಭಾರತದಲ್ಲಿ ಡಿಜಿಟಲ್ ಪಾವತಿ ವೇಗವಾಗಿ ಅಭಿವೃದ್ಧಿ ಆಗುತ್ತಿದ್ದೂ, ಯುಪಿಐ ಪಾವತಿ (UPI payment) ಆನ್ಲೈನ್ನಲ್ಲಿ ಹಣ ಪಾವತಿ ಮಾಡಲು ಬಳಕೆ ಆಗುತ್ತಿದೆ. ಅಂತೆಯೇ ಇನ್ಮುಂದೆ ಯುಪಿಐ ಆಫ್ಲೈನ್ ಟ್ರಾನ್ಸಾಕ್ಷನ್ಗೂ ಬಳಕೆಯಾಗಲಿದೆ. ಬ್ಯಾಂಕುಗಳಲ್ಲಿ ಯುಪಿಐ ಆ್ಯಪ್ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್ಡ್ರಾ ಮಾಡುವ ಸೌಲಭ್ಯ ಒದಗಿಸುವ ಸರಕಾರದಿಂದ ಚಿಂತನೆ ನಡೆದಿದೆ.

ಮೊಬೈಲ್ ಫೋನ್ಗಳಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ಪಡೆಯುವ ಸೌಲಭ್ಯ ನಿರ್ಮಿಸಲು ಅನುವು ಮಾಡಿಕೊಡಬೇಕೆಂದು ಎನ್ಪಿಸಿಐ ಆರ್ಬಿಐ ಬಳಿ ಮನವಿ ಮಾಡಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ವ್ಯಾಪಕವಾಗಿರುವ ಬ್ಯಾಂಕುಗಳ ಉಪಘಟಕಗಳಲ್ಲಿ ಈ ಸೌಲಭ್ಯ ನಿರ್ಮಿಸಲು ಯೋಜಿಸಲಾಗಿದೆ.
ಸದ್ಯ ಎನ್ಪಿಸಿಐ ಮಾಡಿರುವ ಪ್ರಸ್ತಾವದ ಪ್ರಕಾರ, ಬ್ಯಾಂಕುಗಳ ಉಪಘಟಕಗಳಲ್ಲಿ ಇರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಒಮ್ಮೆಗೆ 10,000 ರೂ ವಿತ್ಡ್ರಾ ಮಾಡಲು ಅವಕಾಶ ಕೊಡಬೇಕು. ಒಂದು ಟ್ರಾನ್ಸಾಕ್ಷನ್ನಿಂದ ಮತ್ತೊಂದು ಟ್ರಾನ್ಸಾಕ್ಷನ್ಗೆ 30 ನಿಮಿಷ ಅಂತರ ಇರಬೇಕು ಎನ್ನುವ ಪ್ರಸ್ತಾವ ಇದೆ.
ಈ ವ್ಯವಸ್ಥೆಯಿಂದ ಎಟಿಎಂ ಕಾರ್ಡ್ ಮರೆತಿರುವವರು, ಅಥವಾ ಕಾರ್ಡ್ ಇಲ್ಲದೇ ಇರುವವರು, ಮತ್ತು ಸಮೀಪದಲ್ಲಿ ಎಟಿಎಂಗಳು ಇಲ್ಲದಿರುವವರಿಗೆ ಈ ಕ್ಯುಆರ್ ಕೋಡ್
ಸ್ಕ್ಯಾನ್ ಮಾಡಿ ಕ್ಯಾಷ್ ವಿತ್ಡ್ರಾ ಮಾಡಲು ಸಾಧ್ಯವಿದೆ.
ಗ್ರಾಮೀಣ ಹಾಗೂ ದೂರ ಪ್ರದೇಶಗಳಲ್ಲಿ ಇಂಥ ಬ್ಯಾಂಕ್ ಘಟಕಗಳು ಅಥವಾ ಬ್ಯುಸಿನೆಸ್ ಕರೆಸ್ಪಾಂಡೆಂಟ್ಗಳು ಅಸ್ತಿತ್ವದಲ್ಲಿವೆ. ಒಂದು ಅಂದಾಜು ಪ್ರಕಾರ 20 ಲಕ್ಷ ಬಿಸಿಗಳು ದೇಶಾದ್ಯಂತ ಇವೆ. ಇವೆಲ್ಲದರಲ್ಲೂ ಯುಪಿಐ ಕ್ಯಾಷ್ ವಿತ್ಡ್ರಾಯಲ್ ಸೌಲಭ್ಯ ಅಳವಡಿಕೆಯಾದರೆ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.
Comments are closed.