RTO: ವಾಹನಗಳ ಎನ್‌ಒಸಿ ಪಡೆಯಲು ಇನ್ಮುಂದೆ ಈ ಎಲ್ಲಾ ಮಾಹಿತಿ ನೀಡುವುದು ಕಡ್ಡಾಯ

Share the Article

RTO: ರಾಜ್ಯ ಪ್ರಾದೇಶಿಕ ಸಾರಿಗೆ ಕಚೇರಿಗಳ (RTO) ಕಾರ್ಯನಿರ್ವಹಣೆಗೆ ನೂತನ ವಾಹನ್ ತಂತ್ರಾಂಶ ಅಳವಡಿಸಲಾಗಿದ್ದು, ಈ ಹಿನ್ನಲೆ ಇನ್ನು ಮುಂದೆ ವಾಹನಗಳ ಕ್ಲಿಯರೆನ್ಸ್ ಪ್ರಮಾಣ ಪತ್ರ(NOC) ಮತ್ತು ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಸೂಕ್ತ ಮಾಹಿತಿ ನೀಡುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ:Karnataka Grameena Bank: “ಕರ್ನಾಟಕ ಗ್ರಾಮೀಣ ಬ್ಯಾಂಕ್​​” ನಲ್ಲಿ ಉದ್ಯೋಗ ಅವಕಾಶ

ಕೇಂದ್ರ ಸರ್ಕಾರದ ಸೂಚನೆ ಪ್ರಕಾರ ರಾಜ್ಯದ RTO ಕಚೇರಿಗಳ ಕಾರ್ಯನಿರ್ವಹಣೆಗೆ ಕೇಂದ್ರೀಕೃತ ವಾಹನ್ ತಂತ್ರಾಂಶ ಅಳವಡಿಸಲಾಗಿದೆ. ನೂತನ ತಂತ್ರಾಂಶದಲ್ಲಿ ವಾಹನದ ಹಾರ್ಸ್ ಪವರ್, ಕ್ಯೂಬಿಕ್ ಕೆಪಸಿಟಿ, ವೀಲ್ ಬೇಸ್, ಮೊತ್ತ ಸೇರಿ ಇತರ ಗುರುತಿನ ಮಾಹಿತಿಗಳನ್ನು ನೀಡಬೇಕು. ಒಂದು ವೇಳೆ ಈ ಮೇಲಿನ ಮಾಹಿತಿಗಳು ನಮೂದು ಮಾಡದೇ ಇದ್ದಲ್ಲಿ ವಾಹನಗಳಿಗೆ ಕ್ಲಿಯರೆನ್ಸ್ ಪ್ರಮಾಣ ಪತ್ರ ಮತ್ತು ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯಲು ಸಾಧ್ಯವಾಗುವುದಿಲ್ಲ.

Comments are closed.