English Medium: ರಾಜ್ಯದಲ್ಲಿ ಮತ್ತೆ 984 ಆಂಗ್ಲ ಮಾಧ್ಯಮ ಶಾಲೆ ಆರಂಭ

English Medium: ರಾಜ್ಯದಲ್ಲಿ ಮತ್ತೆ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಭಾರೀ ಬೇಡಿಕೆ ಇರುವ ಹಿನ್ನಲೆ ಈಗ ರಾಜ್ಯ ಸರಕಾರ ಇದೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ 984 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮ (English Medium) ಶಾಲೆಗಳನ್ನು ಸ್ಥಾಪಿಸಲು ಮುಂದಾಗಿದೆ.

ಅಂತೆಯೇ ರಾಜ್ಯದಲ್ಲಿನ ದ್ವಿಭಾಷಾ ಮಾಧ್ಯಮದ ಸರಕಾರಿ ಶಾಲೆಯ ಸಂಖ್ಯೆ 8,118ಕ್ಕೆ ಏರಲಿದೆ. ಈ ಪೈಕಿ ದಕ್ಷಿಣ ಕನ್ನಡದಲ್ಲಿ 35 ಹಾಗೂ ಉಡುಪಿಯಲ್ಲಿ 4 ಶಾಲೆಗಳು ಮಂಜೂರು ಮಾಡಲಾಗಿದೆ.
ಈಗಾಗಲೇ ರಾಜ್ಯದಲ್ಲಿ 2019-20ನೇ ಸಾಲಿನಲ್ಲಿ ಸಾವಿರ ದ್ವಿಭಾಷಾ ಮಾಧ್ಯಮಗಳ ಶಾಲೆಗಳ ಸ್ಥಾಪನೆಗೆ ಆದೇಶ ನೀಡಲಾಗಿತ್ತು. ನಂತರ 2024-25ರಲ್ಲಿ 11,792 ದ್ವಿಭಾಷೆ ಶಾಲೆಗಳಿಗೆ ಅನುಮೋದನೆ ನೀಡಲಾಗಿತ್ತು. ಇದೀಗ ಈ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಒಮ್ಮೆ 208, ಆ ಬಳಿಕ 4,134 ದ್ವಿಭಾಷಾ (English Medium)ಶಾಲೆಗಳಿಗೆ ಅನುಮತಿ ನೀಡಲಾಗಿತ್ತು. ಈಗ ಜನ ಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳ ಶಿಫಾರಸಿನ ಮೇರೆಗೆ ಮತ್ತೆ 984 ಪ್ರಾಥಮಿಕ ಸರಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದ (kannada Medium) ಜತೆಗೆ ಆಂಗ್ಲ ಮಾಧ್ಯಮವನ್ನು ಆರಂಭಿಸಲು ಸರಕಾರ ಅನುಮೋದನೆ ನೀಡಿದೆ.
Comments are closed.