Egg: ಮೊಟ್ಟೆ ಪ್ರೆಶ್ ಆಗಿದೆಯೋ? ಹಾಳಾಗಿದೆಯೇ ಎಂದು ಈ ರೀತಿ ಸುಲಭವಾಗಿ ತಿಳಿಯಿರಿ

Egg: ಮೊಟ್ಟೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಕೆಲವರಿಗೆ ಪ್ರತೀ ದಿನ ಆಹಾರದಲ್ಲಿ ಮೊಟ್ಟೆ ಒಂದು ಇರಲೇ ಬೇಕು. ಮೊಟ್ಟೆಯಲ್ಲಿ ಹೆಚ್ಚಿನ ಪ್ರೋಟೀನ್ ಇರುವ ಕಾರಣ ಡಯಟ್ ಫುಡ್ ಆಗಿಯೂ ಇದನ್ನು ಬಳಸುತ್ತಾರೆ. ಅದಕ್ಕಾಗಿ ಮನೆಯಲ್ಲಿ ಮೊಟ್ಟೆ ಸ್ಟಾಕ್ ಇಟ್ಟುಕೊಳ್ಳುವುದು ಸಾಮಾನ್ಯ. ಆದ್ರೆ ಮೊಟ್ಟೆಯನ್ನು ಮನೆಗೆ ತರುವಾಗ ಕೆಲವು ಮೊಟ್ಟೆಗಳು(egg) ಹಾಳಾಗಿರುತ್ತವೆ. ಈ ಮೊಟ್ಟೆಗಳು ಹಾಳಾಗಿರುವುದನ್ನು ಪತ್ತೆ ಹಚ್ಚುವ ಸುಲಭ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.

ಕೆಟ್ಟು ಹೋದ ಮೊಟ್ಟೆಯನ್ನು ಕಂಡು ಹಿಡಿಯಲು ಮೊಬೈಲ್ ಟಾರ್ಚ್ ಅನ್ನು ಆನ್ ಮಾಡಿಕೊಂಡು ಅದನ್ನು ಟೇಬಲ್ ಮೇಲೆ ಇಟ್ಟು, ಆ ಲೈಟ್ ಮೇಲೆ ಒಂದೊಂದೇ ಮೊಟ್ಟೆಯನ್ನು ಇಟ್ಟು ಚೆಕ್ ಮಾಡಿ. ಮೊಟ್ಟೆ ಇಟ್ಟಾಗ ಮೊಬೈಲ್ ಲೈಟ್ ಗೆ ಮೊಟ್ಟೆ ಒಳಗೂ ರಿಫ್ಲೆಕ್ಟ್ ಆಗುತ್ತದೆ. ಇದು ಮೊಟ್ಟೆಯು ಕೆಡದೆ ಚೆನ್ನಾಗಿದೆ ಎಂದು ಅರ್ಥ. ಆದರೆ ಮೊಟ್ಟೆ ಒಳಗೆ ಲೈಟ್ ಯಾವುದೇ ರೀತಿ ರಿಫ್ಲೆಕ್ಟ್ ಆಗದಿದ್ದರೆ ಅದು ಕೆಟ್ಟುಹೋಗಿದೆ ಎಂದರ್ಥ.
ಒಂದು ವೇಳೆ ನಿಮಗೆ ನಂಬಿಕೆ ಇಲ್ಲದಿದ್ದಲ್ಲಿ ನೀವು ಲೈಟ್ ರಿಫ್ಲೆಕ್ಟ್ ಆಗದ ಮೊಟ್ಟೆಯನ್ನು ಅಲ್ಲಿ ಒಡೆದು ನೋಡಿದಾಗ ಮೊಟ್ಟೆ ಕೆಟ್ಟುಹೋಗಿರುವುದನ್ನು ಕಾಣಬಹುದು.
Comments are closed.