Bangalore News: ಸೊಸೆಗೆ ವರದಕ್ಷಿಣೆ ಕಿರುಕುಳ ಆರೋಪ, ನಿರ್ದೇಶಕ ಎಸ್‌.ನಾರಾಯಣ್‌, ಪತ್ನಿ, ಪುತ್ರನ ವಿರುದ್ಧ ಬಿತ್ತು FIR

Share the Article

Bangalore News: ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಖ್ಯಾತ ಚಿತ್ರ ನಿರ್ದೇಶಕ ಎಸ್‌.ನಾರಾಯಣ್‌ , ಪತ್ನಿ, ಪುತ್ರನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಈ ಕುರಿತು ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಎಸ್‌ ನಾರಾಯಣ್‌ ಅವರ ಎರಡನೇ ಮಗನ ಪತ್ನಿ ಪವಿತ್ರಾ ದೂರು ನೀಡಿದ್ದಾರೆ.

ಮದುವೆಯಲ್ಲಿ ವರದಕ್ಷಿಣೆ ನೀಡಿದ್ದರೂ, ಹೆಚ್ಚಿನ ಹಣಕ್ಕೆ ಒತ್ತಾಯ ಮಾಡುತ್ತಿದ್ದು, ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ನನ್ನ ಮದುವೆ ಸಮಯದಲ್ಲಿ 1 ಲಕ್ಷದ ಉಂಗುರ ಹಾಗೂ ಖರ್ಚು ವೆಚ್ಚದ ಹಣದ ಪಡೆದಿದ್ದಾರೆ. ನನ್ನ ಪತಿ ಪವನ್‌ ಓದಿರಲಿಲ್ಲ. ಕೆಲಸ ಕೂಡಾ ಸಿಕ್ಕಿರಲಿಲ್ಲ. ನಾನೇ ಎಲ್ಲಾ ಕೆಲಸ ಮಾಡಿ ಮನೆ ಸಂಸಾರ ಸಾಗಿಸುತ್ತಿದ್ದೆ ಇದರ ನಡುವೆ ಫಿಲ್ಮ್‌ ಇನ್ಸ್ಟಿಟ್ಯೂಟ್‌ ಕೂಡಾ ಆರಂಭವಾಗಿತ್ತು. ಇದನ್ನು ಶುರು ಮಾಡಲು ಪವನ್‌ ನಮ್ಮ ಬಳಿ ಹಣ ಕೇಳಿದ್ದರು. ಆಗ ಒಡವೆಗಳನ್ನು ಅಡ ಇಟ್ಟು ಹಣ ನೀಡಿದ್ದೆವು.

ಇದನ್ನೂ ಓದಿ:Tumkur: ABVP ಕಾರ್ಯಕ್ರಮದಲ್ಲಿ ಗೃಹ ಸಚಿವ ಪರಮೇಶ್ವರ್ ಭಾಗಿ – ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ತಳಮಳ !!

ಆದರೆ ಅನಂತರ ಸಂಸ್ಥೆ ನಷ್ಟದಲ್ಲಿ ಮುಳುಗಿತು. ನಾವು 10 ಲಕ್ಷ ರೂ. ಹಣವನ್ನು ಪವನ್‌ಗೆ ನೀಡಿದ್ದೆವು. ನಂತರವೂ ಪವನ್‌ ಹಾಗೂ ಅವರ ತಂದೆ, ತಾಯಿ ನನಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದರು ಎಂದು ಆರೋಪ ಮಾಡಿದ್ದಾರೆ.

Comments are closed.