Satish Sail: ಅಕ್ರಮ ಹಣ ವರ್ಗಾವಣೆ ಆರೋಪ: ಶಾಸಕ ಸತೀಶ್‌ ಸೈಲ್‌ 2 ದಿನ ಇ.ಡಿ. ಕಸ್ಟಡಿಗೆ

Share the Article

Satish Sail: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಅವರನ್ನು ಜನಪ್ರತಿನಿಧೀಗಳ ನ್ಯಾಯಾಲಯವು 2 ದಿನ ಇ.ಡಿ ಕಸ್ಟಡಿಗೆ ಆದೇಶ ಹೊರಡಿಸಿದೆ.

ಸೈಲ್‌ ಪರ ವಕೀಲರು ಮಧ್ಯಂತರ ಜಾಮೀನು ನೀಡುವಂತೆ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದು, ಅನಾರೋಗ್ಯದ ಹಿನ್ನೆಲೆ ಜಾಮೀನು ನೀಡಲು ಮನವಿ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಸಂತೋಷ್‌ ಗಜಾನನ ಭಟ್‌, ಸತೀಶ್‌ ಸೈಲ್‌ ಅವರನ್ನು 2 ದಿನ ಇ.ಡಿ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. ಅಲ್ಲದೇ ಸೆ.12 ರಂದು ಮತ್ತೆ ಕೋರ್ಟ್‌ ಮುಂದೆ ಹಾಜರುಪಡಿಸಲು ಸೂಚನೆ ನೀಡಿದೆ.

ಇತ್ತೀಚೆಗೆ ಇಡಿ ದಾಳಿ ಮಾಡಿದ ಸಂದರ್ಭದಲ್ಲಿ ಕೋಟ್ಯಂತರ ರೂ. ಹಣ ಹಾಗೂ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿತ್ತು. 1.68 ಕೋಟಿ ನಗದು, 6.75 ಕೋಟಿ ನಗದು, 6.75 ಕೆಜಿ ಚಿನ್ನದ ಬಿಸ್ಕೆಟ್‌ಗಳು ಮತ್ತು 14.13 ಕೋಟಿ ಹಣ ಹೊಂದಿರುವ ಬ್ಯಾಂಕ್‌ ಖಾತೆಯನ್ನು ಜಾರಿ ನಿರ್ದೇಶನಾಲಯ ಸೀಜ್‌ ಮಾಡಿತ್ತು.

ಇದನ್ನೂ ಓದಿ:ತೇಜಸ್ವಿ ಯಾದವ್ ಪತ್ನಿ ಒಂದು ‘ಜೆರ್ಸಿ ಹಸು’: ಸುಂಟರಗಾಳಿ ಎಬ್ಬಿಸಿದ ಮಾಜಿ ಶಾಸಕನ ಹೇಳಿಕೆ

ಅಕ್ರಮ ಅದಿರು ಪ್ರಕರಣದಲ್ಲಿ ಜಾಮೀನಿನ ಮೇಲೆ ಶಾಸಕ ಸತೀಶ್‌ ಸೈಲ್‌ ಹೊರಗಿದ್ದು, ಆ.13, 14 ರಂದು ಇ.ಡಿ. ಅಧಿಕಾರಿಗಳು, ಶಾಸಕರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಮಂಗಳವಾರ ಇ.ಡಿ. ಅಧಿಕಾರಿಗಳು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನ ಮಾಡಿದ್ದರು.

Comments are closed.