Vice President: ನಿಮಗೆ ಗೊತ್ತಾ? ಭಾರತದ ಉಪರಾಷ್ಟ್ರಪತಿಗಳಿಗೆ ಯಾವುದೇ ಸಂಬಳವಿಲ್ಲ !!

Vice President : ದೇಶದಲ್ಲಿ ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಿಗೆ ತನ್ನದೇ ಆದಂತಹ ಮಹತ್ವವಿದೆ. ಅಂತೆಯೇ ಸರ್ಕಾರದ ಅಡಿಯಲ್ಲಿ ಆ ಹುದ್ದೆಯಲ್ಲಿರುವ ನಾಯಕರಿಗೆ ಗೌರವಕ್ಕೆ ತಕ್ಕಹಾಗೆ ಸಂಬಳವನ್ನು ಕೂಡ ನೀಡಲಾಗುತ್ತದೆ. ಭಾರತದ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಸುಪ್ರೀಂ ಕೋರ್ಟ್ ಜಡ್ಜ್ ಗಳಿಗೆ ಎಷ್ಟೆಲ್ಲ ಸಂಬಳವಿದೆ ಎಂಬುದು ನಮಗೆಲ್ಲ ತಿಳಿದಿದೆ. ಆದರೆ ಭಾರತದ ಉಪರಾಷ್ಟ್ರಪತಿಗಳಿಗೆ ಯಾವುದೇ ರೀತಿಯ ಸಂಬಳ ನೀಡುವುದಿಲ್ಲವೆಂಬುದು ನಿಮಗೆ ಗೊತ್ತಿದೆಯೇ?

ಹೌದು, ದೇಶದ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ಭಾರತದ ಉಪರಾಷ್ಟ್ರಪತಿ ಹುದ್ದೆಯು ನಿಯಮಿತ ಸಂಬಳದ ಪ್ರಯೋಜನ ಪಡೆಯದ ಏಕೈಕ ಹುದ್ದೆಯಾಗಿದೆ. ಆದರೂ ಕೂಡ ಅವರು ಬೇರೊಂದು ರೂಪದಲ್ಲಿ ಸಂಬಳವನ್ನು ಪಡೆಯುತ್ತಾರೆ. ಅಂದರೆ ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರ ಪಾತ್ರಕ್ಕಾಗಿ ಮಾತ್ರ ಉಪರಾಷ್ಟ್ರಪತಿಗಳು ತಮ್ಮ ಸಂಬಳವನ್ನು ಪಡೆಯುತ್ತಾರೆ. ಈ ವೇತನವೇ ತಿಂಗಳಿಗೆ ಸುಮಾರು ನಾಲ್ಕು ಲಕ್ಷ ರೂಪಾಯಿ ಇದೆ.
ಇನ್ನು ಸಂಬಳ ಇರದಿದ್ದರೂ ಉಪರಾಷ್ಟ್ರಪತಿಗಳು ಉಚಿತ ವಸತಿ, ವೈದ್ಯಕೀಯ ಆರೈಕೆ, ರೈಲು ಮತ್ತು ವಿಮಾನ ಪ್ರಯಾಣ, ಸ್ಥಿರ ದೂರವಾಣಿ ಸಂಪರ್ಕ, ಮೊಬೈಲ್ ಫೋನ್ ಸೇವೆ, ವೈಯಕ್ತಿಕ ಭದ್ರತೆ ಮತ್ತು ಸಿಬ್ಬಂದಿ ಸೇರಿದಂತೆ ಹಲವಾರು ಸವಲತ್ತುಗಳು ಮತ್ತು ಭತ್ಯೆಗಳನ್ನು ಪಡೆಯುತ್ತಾರೆ.
Comments are closed.