Home Food Tea: ನೀವು ಚಹಾ ಮಾಡುವ ವಿಧಾನ ಸರಿಯೋ, ತಪ್ಪೋ? ಈ 3 ಅಂತವನ್ನ ಫಾಲೋ ಮಾಡಿದ್ರೆ...

Tea: ನೀವು ಚಹಾ ಮಾಡುವ ವಿಧಾನ ಸರಿಯೋ, ತಪ್ಪೋ? ಈ 3 ಅಂತವನ್ನ ಫಾಲೋ ಮಾಡಿದ್ರೆ ಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಹೆಚ್ಚು

Hindu neighbor gifts plot of land

Hindu neighbour gifts land to Muslim journalist

Tea: ಎಷ್ಟು ಕುಡಿದರೂ ಬೇಸರವೇ ತರಿಸದಂತಹ ಒಂದು ಡ್ರಿಂಕ್ಸ್ ಎಂದರೆ ಅದು ಚಹಾ. ಯಾವುದೇ ಖುಷಿ ವಿಚಾರವಿರಲಿ, ಬೇಸರದ ಸಂಗತಿ ಇರಲಿ ಒಂದು ಚಹಾ ಕುಡಿದರೆ ಅದು ನಿರಾಳ, ನೆಮ್ಮದಿ. ಸಾಮಾನ್ಯವಾಗಿ ಎಲ್ಲರಿಗೂ ಚಹಾ ಮಾಡುವುದು ಗೊತ್ತೇ ಇದೆ. ಪುರುಷರು ಕೂಡ ಮಹಿಳೆಯರಿಗಿಂತ ತುಂಬಾ ರುಚಿಕರವಾಗಿ ಚಹಾ ಮಾಡುತ್ತಾರೆ. ಆದರೆ ನೀವು ಚಹಾ ತಯಾರಿಸುವಾಗ ಈ ಮೂರು ಹಂತಗಳನ್ನು ಫಾಲೋ ಮಾಡಿದರೆ ಆರೋಗ್ಯಕ್ಕೂ ಒಳ್ಳೆಯದು ಮತ್ತು ರುಚಿಯೂ ಹೆಚ್ಚು.

ಮೊದಲ ಹಂತ: ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ನೀರು ಕುದಿಯುವಾಗ, ಅದಕ್ಕೆ ಚಹಾ ಪುಡಿ ಹಾಕಿ, ಸುಮಾರು 5 ನಿಮಿಷಗಳ ಕಾಲ ಕುದಿಯಲು ಬಿಡಿ. ಈ ಸಮಯದಲ್ಲಿ ಬೇಕಾದರೆ ಶುಂಠಿ ಅಥವಾ ಏಲಕ್ಕಿಯನ್ನು ಕೂಡ ಸೇರಿಸಬಹುದು. ಇದು ಚಹಾದ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಎರಡನೇ ಹಂತ: ಹೆಚ್ಚಿನ ಜನರು ಹಾಲು ಸೇರಿಸಿದ ನಂತರ ಸಕ್ಕರೆ ಸೇರಿಸುವ ತಪ್ಪನ್ನು ಮಾಡುತ್ತಾರೆ. ವಾಸ್ತವವಾಗಿ ಸರಿಯಾದ ಸಮಯವೆಂದರೆ ನೀರು ಮತ್ತು ಚಹಾ ಪುಡಿ ಕುದಿಯಲು ಪ್ರಾರಂಭಿಸಿದ ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಕರಗಲು ಬಿಡಿ.

ಇದನ್ನೂ ಓದಿ:Bhavana Ramanna: IVF ಮೂಲಕ ಅವಳಿ ಮಕ್ಕಳ ಜನನ – ಮಗು ಕಳೆದುಕೊಂಡ ಭಯಾನಕ ಅನುಭವವನ್ನು ಬಿಚ್ಚಿಟ್ಟ ಭಾವನ ರಾಮಣ್ಣ

ಮೂರನೇ ಹಂತ: ಸಕ್ಕರೆ ಕರಗಿದ ನಂತರ, ಹಾಲು ಸೇರಿಸಿ. ಇದಾದ ಬಳಿಕ ಚಹಾವನ್ನು ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ. ಕ್ರಮೇಣ ಚಹಾದ ಬಣ್ಣ ಗಾಢವಾಗುತ್ತದೆ ಮತ್ತು ರುಚಿ ಸಮತೋಲನಗೊಳ್ಳುತ್ತದೆ. ಇದು ಪರಿಪೂರ್ಣ ಚಹಾ