Cancer vaccine: ಕ್ಯಾನ್ಸರ್‌ ಗುಣಪಡಿಸುವ ಲಸಿಕೆ! ಬಳಕೆ ಯಾವಾಗ?

Share the Article

Cancer vaccine: ಮಾರಕ ಕ್ಯಾನ್ಸರ್‌ಗೆ ಶಾಶ್ವತ ಔಷಧಿ ಸಿದ್ಧಪಡಿಸುವಲ್ಲಿ ರಷ್ಯಾ ವಿಜ್ಞಾನಿಗಳು ಯಶಸ್ವಿ ಆಗಿದ್ದಾರೆ. ರಷ್ಯಾದ ವಿಜ್ಞಾನಿಗಳ ಎಆರ್‌ಎನ್‌ಎ ಆಧರಿತ ಈ ವ್ಯಾಕ್ಸಿನ್‌ (Cancer vaccine) ಪೂರ್ವ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಶೇಕಡ 100ರಷ್ಟು ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಸಾಬೀತಾಗಿದೆ. ಆದರೆ, ಇದರ ಬಳಕೆಗೆ ಅಂತಿಮ ಒಪ್ಪಿಗೆ ಸಿಗುವುದೊಂದು ಬಾಕಿಯಿದೆ.

ರಷ್ಯಾ ಸರ್ಕಾರವು ಈ ವ್ಯಾಕ್ಸಿನ್ ಬಳಕೆಗೆ ಅಂತಿಮ ಒಪ್ಪಿಗೆ ನೀಡಬೇಕಿದೆ. ಒಪ್ಪಿಗೆ ಸಿಕ್ಕ ಬಳಿಕವೇ ಇದು ವಿಶ್ವದ ಮೊದಲ ಕ್ಯಾನ್ಸರ್‌ ಲಸಿಕೆ ಎಂಬ ಹೆಗ್ಗಳಿಕೆ ಪಡೆದುಕೊಳ್ಳಲಿದೆ.

ಇದನ್ನೂ ಓದಿ:Gold Price Today: ಇಂದು ಚಿನ್ನದ ಬೆಲೆ ಕುಸಿತ, ಬೆಳ್ಳಿ ದರ ಎಷ್ಟು?

ಎಂಟರೋಮಿಕ್ಸ್‌ (Enteromix) ಎಂಬ ಹೆಸರಿನ ಈ ವ್ಯಾಕ್ಸಿನ್‌ ಅನ್ನು ಪೂರ್ವ ಕ್ಲಿನಿಕಲ್‌ ಟ್ರಯಲ್‌ನಲ್ಲಿ ದೊಡ್ಡ ಕ್ಯಾನ್ಸರ್‌ ಟ್ಯೂಮರ್‌ ಹೊಂದಿರುವ ರೋಗಿಗಳ ಮೇಲೆ ಪ್ರಯೋಗಿ ಮಾಡಲಾಗಿದೆ. ಈ ವೇಳೆ ಕ್ಯಾನ್ಸರ್‌ ನಾಶ ಮಾಡುವ ಮೂಲಕ ಟ್ಯೂಮರ್‌ನ ಗಾತ್ರವನ್ನೂ ಕಡಿಮೆ ಮಾಡುವಲ್ಲಿ ವ್ಯಾಕ್ಸಿನ್‌ ಯಶಸ್ವಿ ಆಗಿದೆ ಎಂದು ಈ ವ್ಯಾಕ್ಸಿನ್‌ ಅಭಿವೃದ್ಧಿಪಡಿಸಿದ ಫೆಡರಲ್‌ ಮೆಡಿಕಲ್‌ ಆಯಂಡ್‌ ಬಯೋಲಾಜಿಕಲ್‌ ಏಜೆನ್ಸಿ (FMBA) ತಿಳಿಸಿದೆ ಎಂದು ವರದಿಯಾಗಿದೆ. ಇನ್ನು ಎಂಆರ್‌ಎನ್‌ಎ ತಂತ್ರಜ್ಞಾನ ಬಳಕೆ ಮಾಡಿಕೊಂಡು ಈ ವ್ಯಾಕ್ಸಿನ್‌ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

Comments are closed.