Mangalore: ಕೊಳವೆ ಬಾವಿ ಮಂಜೂರಿಗೆ ಲಂಚ ಸ್ವೀಕಾರ: ಗ್ರಾಪಂ ಅಧ್ಯಕ್ಷೆ, ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

Mangalore: ಮಂಗಳೂರು: ಕೊಳವೆಬಾವಿ ಮಂಜೂರಿಗೆ 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದ ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೆಫೀಸಾ ಮತ್ತು ಬಿಲ್ ಕಲೆಕ್ಟರ್ ವಿಲಿಯಂ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪೆರುವಾಯಿ ಗ್ರಾಮದಲ್ಲಿ ತಮ್ಮ ಜಮೀನಿಗೆ ಸರಕಾರದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಕೊಳವೆಬಾವಿ ಮಾಡಿಕೊಡುವಂತೆ 75 ವರ್ಷದ ಹಿರಿಯೊಬ್ಬರು ಮನವಿ ಸಲ್ಲಿಕೆ ಮಾಡಿದ್ದು, ಗ್ರಾಮ ಪಂಚಾಯಿತಿ ಕಚೇರಿಗೆ ಅನೇಕ ಸಲ ಹೋಗಿ ವಿಚಾರಿಸಿದ್ದರೂ ನಿರ್ಲಕ್ಷ್ಯ ಮಾಡಿದ್ದರು. ಹಾಗೂ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದಾರೆ.
ಇದನ್ನೂ ಓದಿ:ಈ ದಂಪತಿಯ ತಿಂಗಳ ಮನೆ ಖರ್ಚು 5.9 ಲಕ್ಷ ರೂ.; ಅವರ ಲೆಕ್ಕ ನೋಡಿ ಬೇಸರ ಪಡ್ಕೋ ಬೇಡಿ ಪ್ಲೀಸ್!
ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರನ್ನು ನೀಡಲಾಗಿತ್ತು. ಸೆ.6 ರಂದು ಶನಿವಾರ ನೆಫೀಸಾ ಮತ್ತು ಬಿಲ್‌ಕಲೆಕ್ಟರ್ ವಿಲಿಯಂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
Comments are closed.