Davangere : ‘ ರೇಣುಕಾ ಸ್ವಾಮಿ ಫ್ಯಾಮಿಲಿಗೆ BMW ಕಾರ್, MLA ಟಿಕೆಟ್, ಸರ್ಕಾರಿ ನೌಕರಿ ಕೊಡಿ – ರೇಣುಕಾಸ್ವಾಮಿ ಅಭಿಮಾನಿಯಿಂದ ಸರ್ಕಾರಕ್ಕೆ ಮನವಿ

Davangere : ರಾಜ್ಯಾದ್ಯಂತ ಬಾರಿ ಚರ್ಚೆಗೆ ಗ್ರಾಸವಾಗಿದ್ದ ‘ಡಿ ಗ್ಯಾಂಗ್’ ಇಂದು ನಡೆದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಇನ್ನು ಕೂಡ ತಾರ್ಕಿಕಾಂತ್ಯವನ್ನು ಪಡೆದಿಲ್ಲ. ಈಗಾಗಲೇ ನಟ ದರ್ಶನ್ ಮತ್ತು ಇತರ ಆರೋಪಿಗಳ ಜಾಮೀನ್ ಅನ್ನೋ ರದ್ದುಗೊಳಿಸಿ ಸುಪ್ರೀಂಕೋರ್ಟ್ ಮತ್ತೆ ಅವರನ್ನು ಜೈಲು ಪಾಲಾಗುವಂತೆ ಮಾಡಿದೆ. ಇದರ ನಡುವೆ ರೇಣುಕಾ ಸ್ವಾಮಿಯ ಅಭಿಮಾನಿಗಳ ಸಂಘ ಒಂದು ಹುಟ್ಟಿಕೊಂಡಿದೆ. ಅಷ್ಟೇ ಅಲ್ಲ ಈ ಸಂಘದ ಸದಸ್ಯನ ಡಿಮ್ಯಾಂಡ್ ಕೇಳಿದರೆ ನಿಮಗೆ ಸುಸ್ತು ಹೊಡೆಯುತ್ತೆ.

https://www.instagram.com/reel/DONSSS8EQ5l/?igsh=eXlqb3NrcG4xcHIw
ಹೌದು, ದಾಣಣಗೆರೆಯ ರೇಣುಕಾಸ್ವಾಮಿ ಅಭಿಮಾನಿಗಳ ಸಂಘದ ಹೆಸರಿನಲ್ಲಿ ಯುವಕನೊಬ್ಬ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯ ಸರ್ಕಾರದ ಮುಂದೆ ಒಂದಷ್ಟು ಬೇಡಿಕೆಗಳನ್ನು ಇಟ್ಟಿರುವುದು ಸಾಕಷ್ಟು ಸದ್ದು ಮಾಡುತ್ತಿದೆ. ಈ ಯುವಕ ತಾನು ರೇಣುಕಾಸ್ವಾಮಿ ಅಭಿಯಾನಿ ಸಂಘದವನು ಎಂದು ಹೇಳಿಕೊಂಡು 4 ಪ್ರಮುಖ ಬೇಡಿಕೆ ಸರ್ಕಾರದ ಮುಂದೆ ಇಟ್ಟಿದ್ದಾನೆ. ಇದನ್ನು unique_editzz_18 ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
”ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ತಂದೆಗೆ BMW ಕಾರ್ ಕೊಡಬೇಕು. ಆತನ ಪತ್ನಿಗೆ ಎ ಗ್ರೇಡ್ ಸರ್ಕಾರಿ ನೌಕರಿ ನೀಡುವಂತೆ ಒತ್ತಾಯಿಸಿದ್ದಾರೆ. ಅಷ್ಟು ಮಾತ್ರವಲ್ಲದೇ ಕಾಂಗ್ರೆಸ್ ಸರ್ಕಾರ ಮೃತ ರೇಣುಕಾಸ್ವಾಮಿ ತಾಯಿಗೆ ಚಿತ್ರದುರ್ಗದಿಂದ MLA ಟಿಕೆಟ್ ನೀಡಬೇಕು. ಇಂದಿನ ಕಾಂಗ್ರೆಸ್ ಸರ್ಕಾರ ರೇಣುಕಾಸ್ವಾಮಿ ಹೆಸರಿನಲ್ಲಿ ಹೆಣ್ಮಕ್ಕಳ ರಕ್ಷಣೆಗೆ ಫಂಡ್ ನೀಡುವಂತೆ” ಮನವಿಯ ವಿಡಿಯೋ ಮಾಡಿದ್ದಾನೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಗೆ ಬಗೆಯ ಕಮೆಂಟನ್ನು ಕಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ:Relationship: ಕುಕೀ ಜಾರಿಂಗ್ ಎಂಬ ಡೇಂಜರಸ್ ರಿಲೇಶನ್‌ಶಿಪ್ ಬಗ್ಗೆ ಎಚ್ಚರ!
Comments are closed.