ಟ್ರಾಫಿಕ್ ಫೈನ್’ಗೆ 50% ಡಿಸ್ಕೌಂಟ್ ಆಫರ್: ಕೊನೆಯ ದಿನಾಂಕ ಗಮನಿಸಿ

ಬೆಂಗಳೂರು: ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ ನೀಡಿದ್ದಕ್ಕೆ ಒಳ್ಳೆಯ ರೆಸ್ಪಾನ್ಸ್ ದೊರೆತಿದೆ. ಈ ಆಫರ್ ಸಿಕ್ಕಿದ 15 ದಿನಕ್ಕೆ ದಂಡದ ಪಾವತಿ ಮೊತ್ತ 45 ಕೋಟಿ ರೂ. ದಾಟಿದೆ. ಒಟ್ಟು 16 ಲಕ್ಷಕ್ಕೂ ಹೆಚ್ಚು ಟ್ರಾಫಿಕ್ ಫೈನ್ ನೋಟಿಸಿಗೆ 45.50 ಕೋಟಿ ರೂ. ದಂಡ ಪಾವತಿ ಮಾಡಲಾಗಿದೆ.

ಈ ಹಿಂದೆ, ಬೆಂಗಳೂರು ಸಂಚಾರಿ ಪೊಲೀಸರು ವಾಹನ ಸವಾರರಿಗೆ ಆ.23ರಿಂದ ದಂಡ ಪಾವತಿಸಲು ರಿಯಾಯಿತಿ ನೀಡಿದ್ದರು. ಈ ದಿನಾಂಕ ಸೆ.12ರವರೆಗೆ ಜಾರಿಯಲ್ಲಿ ಇರಲಿದ್ದು ದಂಡ ಪಾವತಿ ಮಾಡಲು ಅವಕಾಶ ಇರಲಿದ್ದು, ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ.
ರಾಜ್ಯ ಸಾರಿಗೆ ಇಲಾಖೆ ಈ ಬಗ್ಗೆ ಆದೇಶ ಹೊರಡಿಸಿ, ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ 50% ಮಾತ್ರ ಮೊತ್ತವನ್ನು ಪಾವತಿಸುವಂತೆ ರಿಯಾಯಿತಿ ಘೋಷಿಸಿದ್ದರು.
Comments are closed.