Prajwal Revanna: ಪ್ರಜ್ವಲ್‌ ರೇವಣ್ಣ ಈಗ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್‌

Share the Article

Prajwal Revanna: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಜೈಲಿನಲ್ಲಿ ಲೈಬ್ರರಿ ಕ್ಲರ್ಕ್‌ ಆಗಿ ಕೆಲಸ ಮಾಡಿರುವ ಕುರಿತು ವರದಿಯಾಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಪರಾಧಿ ಪ್ರಜ್ವಲ್‌ ರೇವಣ್ಣ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್‌ ಕೆಲಸ ಮಾಡಿದ್ದು, ಜೈಲಿನಲ್ಲಿರುವ ಕೈದಿಗಳು, ವಿಚಾರಣಾಧೀನ ಕೈದಿಗಳು ಜೈಲಿನ ಲೈಬ್ರರಿಗೆ ಬಂದು ಪುಸ್ತಕಗಳನ್ನು ಪಡೆದರೆ ಅವುಗಳನ್ನು ನೋಂದಣಿ ಮಾಡಿಕೊಡುವ ಕೆಲಸ ಇದು.

ಇದನ್ನೂ ಓದಿ:Mumbai: 400 ಕೆ.ಜಿ RDX ಬಳಸಿ ಮುಂಬೈ ಸ್ಫೋಟ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿ ಅರೆಸ್ಟ್‌

ದಿನಗೂಲಿ ರೀತಿ ಪ್ರಜ್ವಲ್‌ ರೇವಣ್ಣಗೆ ಸಂಬಳ ನೀಡಲಾಗುವುದು. ಕೆಲಸಕ್ಕೆ ಬಾರದ ಸಮಯದಲ್ಲಿ ಸಂಬಳ ಕಡಿತ ಮಾಡಲಾಗುವುದು. ಒಂದು ದಿನಕ್ಕೆ ರೂ.522 ಸಂಬಳ ನಿಗದಿ ಮಾಡಲಾಗಿದೆ. ಪ್ರಜ್ವಲ್‌ ರೇವಣ್ಣ ಲೈಬ್ರರಿ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

Comments are closed.