Royal Enfield: GST ಪರಿಷ್ಕರಣೆ ನಂತರ ರಾಯಲ್ ಎನ್‌ಫೀಲ್ಡ್ ಬುಲೆಟ್ ರೇಟ್ ಎಷ್ಟಿದೆ ? ಬೆಲೆ ಕಡಿಮೆಯೋ, ಇಲ್ಲ ಜಾಸ್ತಿಯೋ

Share the Article

Royal Enfield : ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗೆ ವಿಶೇಷ ಕ್ರೇಜ್ ಇದೆ. ಹಾಗೂ ಅತಿ ಇದು ಬಾರಿ ವೈಯಕಳಲ್ಲಿ ಇದು ಕೂಡ ಒಂದು. ಈ ಬೈಕ್ ತನ್ನ ಪವರ್‌ಫುಲ್ ಲುಕ್ ಮತ್ತು ಅದ್ಭುತ ಪರ್ಫಾರ್ಮೆನ್ಸ್‌ಗೆ ಗ್ರಾಹಕರಲ್ಲಿ ಪ್ರಸಿದ್ಧವಾಗಿದೆ. ನೀವೇನಾದರೂ ಈ ಬೈಕ್ ಅನ್ನು ಖರೀದಿ ಮಾಡುವ ಆಲೋಚನೆಯಲ್ಲಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ.

ಅದೇನೆಂದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಹೊಸ ದರಗಳು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ಹೀಗಾಗಿ ಸೆಪ್ಟೆಂಬರ್ 22, 2025 ರಿಂದ ದೇಶದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350cc ಗೆ ಕೇವಲ 18% GST ತೆರಿಗೆ ವಿಧಿಸಲಾಗುತ್ತದೆ. ಈಗ ನೀವು ಈ ಬೈಕ್ ಅನ್ನು ಹಿಂದಿನ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಹಾಗಾದ್ರೆ ರಾಯಲ್ ಎನ್ ಫೀಲ್ಡ್ ಬುಲೆಟ್ ಬೆಲೆ ಎಷ್ಟಾಗಲಿದೆ?

ಇದನ್ನೂ ಓದಿ:White house: ಶ್ವೇತಭವನದಲ್ಲಿ ಟೆಕ್ ಸಿಇಒಗಳಿಗೆ ಟ್ರಂಪ್‌ ಔತಣಕೂಟ: ಎಲಾನ್ ಮಸ್ಕ್ ಗೈರು : ಗೂಗಲ್ ಸಿಇಒ ಪಿಚೈನ್ನು ಹೊಗಳಿದ ಟ್ರಂಪ್

ಭಾರತದಲ್ಲಿ ಇದರ ಆರಂಭಿಕ ಎಕ್ಸ್‌ಶೋರೂಮ್ ಬೆಲೆ 1 ಲಕ್ಷ 75 ಸಾವಿರ ರೂಪಾಯಿಗಳು. ಇದರ ಮೇಲೆ ಪ್ರತಿ ವರ್ಷ 28% GST ತೆರಿಗೆ ವಿಧಿಸಲಾಗುತ್ತಿತ್ತು, ಇದರಿಂದಾಗಿ ಇದರ ಬೆಲೆ 38 ಸಾವಿರ 281 ರೂಪಾಯಿಗಳಷ್ಟು ಹೆಚ್ಚಾಗುತ್ತಿತ್ತು. ಈಗ ಈ GST ತೆರಿಗೆಯನ್ನು ಸಂಪೂರ್ಣವಾಗಿ ತೆಗೆದುಹಾಕಿದರೆ, ಬುಲೆಟ್‌ನ ಒಟ್ಟು ಬೆಲೆ ಸುಮಾರು 1 ಲಕ್ಷ 37 ಸಾವಿರ ರೂಪಾಯಿಗಳಷ್ಟಾಗುತ್ತದೆ. ಅಂದಾಜಿನ ಪ್ರಕಾರ, ಇದರ ಬೆಲೆ 1 ಲಕ್ಷ 75 ಸಾವಿರ ರೂಪಾಯಿಗಳಿಂದ 1 ಲಕ್ಷ 61 ಸಾವಿರ ರೂಪಾಯಿಗಳಿಗೆ ಇಳಿದಿದೆ. ಅಂದರೆ ಈಗ ಈ ಬೈಕ್ ಖರೀದಿಸಿದರೆ, 28% ಬದಲಿಗೆ 18% GST ಪಾವತಿಸಬೇಕಾಗುತ್ತದೆ.

Comments are closed.