Bengaluru : ಅಪ್ಪನ ಅಶ್ಲೀಲ ವಿಡಿಯೋ ಇಟ್ಟುಕೊಂಡು 5 ಕೋಟಿ ಬ್ಲಾಕ್ ಮೇಲ್ ಮಾಡಿದ ‘ದಾರಿತಪ್ಪಿದ ಮಗ’

Share the Article

Bengaluru : ಮುಂದುವರೆದ ಈ ಜಗತ್ತಿನಲ್ಲಿ ಅನೇಕ ಫ್ರಾಡ್ಗಳು, ಸೈಬರ್ ಕ್ರೈಂ ಗಳು, ಡಿಜಿಟಲ್ ಅರೆಸ್ಟ್ ಗಳು ಹಾಗೂ ಯಾವುದೋ ವಿಡಿಯೋ, ಫೋಟೋಗಳನ್ನು ಎಡಿಟ್ ಮಾಡಿ ಬ್ಲಾಕ್ ಮೇಲ್ ಮಾಡುವಂತ ಅನೇಕ ವಂಚನೆ ಪ್ರಕರಣಗಳು ದಿನನಿತ್ಯ ನಡೆಯುತ್ತಿವೆ. ಅಂತೆಯೇ ಇದೀಗ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ ಒಂದು ಬೆಳಕಿಗೆ ಬಂದಿದ್ದು ಇಲ್ಲೊಬ್ಬ ದಾರಿ ತಪ್ಪಿದ ಮಗ ತನ್ನ ಅಪ್ಪನ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ.

ಹೌದು, ಬೆಂಗಳೂರಿನ ಉದ್ಯಮಿಯೊಬ್ಬರ ಪುತ್ರ ಪ್ರಣಮ್ ಎಂಬಾತ ಅಪ್ಪನ ಅಶ್ಲೀಲ ವಿಡಿಯೋ ಇಟ್ಟುಕೊಂಡು ತಂದೆಗೆ ಬ್ಲಾಕ್ ಮೇಲ್ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಇದೀಗ ತನ್ನ ಮಗನ ವಿರುದ್ಧ ತಂದೆ ಪೊಲೀಸರಿಗೆ ದೂರು ನೀಡಿದ್ದು, ಪ್ರಣಮ್ ಮತ್ತು ಆತನಿಗೆ ಕುಮ್ಮಕ್ಕು ನೀಡಿದವರು ಜೈಲು ಸೇರಿದ್ದಾರೆ.

ಇದನ್ನೂ ಓದಿ:Weather Report: ಕರ್ನಾಟಕದ ಹವಾಮಾನ ಮುನ್ಸೂಚನೆ: ಸೆ.8ರಿಂದ ಸಾಮಾನ್ಯ ಮಳೆ ಇದ್ದು, ಮೋಡ-ಬಿಸಿಲಿನ ವಾತಾವರಣ

ಪ್ರಣಮ್ ತಂದೆ ರಿಯಲ್ ಎಸ್ಟೇಟ್ ಉದ್ಯಮಿ. ಸಾಕಷ್ಟು ಹಣವನ್ನು ಗಳಿಸಿದ್ದಾರೆ. ಮಗನ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಅವರು, ಪ್ರಣಮ್‌ಗೆ 18 ವರ್ಷ ತುಂಬುತ್ತಿದ್ದಂತೆಯೇ 2 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆತನ ಹೆಸರಿಗೆ ವರ್ಗಾಯಿಸಿದ್ದರು. ಆದರೆ, ದುಶ್ಚಟಗಳಿಗೆ ದಾಸನಾಗಿದ್ದ ಪ್ರಣಮ್ ಈ ಆಸ್ತಿಯನ್ನು ಜೂಜು ಮತ್ತು ಸಿನಿಮಾ ಮಾಡುವ ಹುಚ್ಚಿಗೆ ಕಳೆದುಕೊಂಡಿದ್ದ. ಈಗ ಆಸ್ತಿಗಾಗಿ ತಂದೆಗೆ ಬ್ಲಾಕ್‌ಮೇಲ್ ಮಾಡುವ ಮಟ್ಟಕ್ಕೆ ಇಳಿದಿದ್ದಾನೆ. ಇದೀಗ ಹಿತ ತನ್ನ ತಂದೆಗೆ ಖೆಡ್ಡ ತೋಡಲು ಮುಂದಾಗಿ ಜೈಲು ಸೇರಿದ್ದಾನೆ.

Comments are closed.