Ship: ಮೊದಲ ಬಾರಿಗೆ ನೀರಿಗಿಳಿಯುತ್ತಿದ್ದಂತೆ 15 ನಿಮಿಷದಲ್ಲೇ ಮುಳುಗಿದ ಐಷಾರಾಮಿ ಹಡಗು !!

Ship: ಆಗ ತಾನೇ ಪ್ರಯಾಣ ಆರಂಭಿಸಿದ ಸುಮಾರು ಎಂಟು ಕೋಟಿ ಅಧಿಕ ಮೌಲ್ಯದ ಐಷಾರಾಮಿ ಹಡಗೊಂದು ಮುಳುಗಿರುವ ಅಚ್ಚರಿ ಘಟನೆ ನಡೆದಿದೆ.

A brand-new luxury yacht, valued at $1M USD, sank just 15 minutes after its maiden launch.
— Science girl (@gunsnrosesgirl3) September 3, 2025
ಹೌದು, ಟರ್ಕಿಯಲ್ಲಿ ಈ ದುರಂತ ನಡೆದಿದೆ. ಡೋಲ್ಸ್ ವೆಂಟೊ ಹೆಸರಿನ ಈ ವಿಹಾರಿ ನೌಕೆಯು ಸರಿಸುಮಾರು 85 ಅಡಿ ಉದ್ದವಿತ್ತು. ಇದು ಮಂಗಳವಾರ ಉತ್ತರ ಟರ್ಕಿಯ ಎರೆಗ್ಲಿ ಜಿಲ್ಲೆಯ ಜೊಂಗುಲ್ಡಕ್ ಕರಾವಳಿಯಲ್ಲಿ ತನ್ನ ಚೊಚ್ಚಲ ಪ್ರಯಾಣ ಆರಂಭಿಸಿದ 15 ನಿಮಿಷದಲ್ಲಿ ಮುಳುಗಡೆಯಾಗಿದೆ.
ಜೊಂಗುಲ್ಡಕ್ ಕರಾವಳಿಯ ನೀರಿನಲ್ಲಿ ಹಡಗು ನಿಧಾನವಾಗಿ ಮುಳುಗುತ್ತಿದ್ದಂತೆ, ಹಡಗಿ ಮಾಲೀಕ ಮತ್ತು ಇತರರು ಯಾವುದೇ ಹಾನಿಯಾಗದೆ ಕ್ರಮೇಣ ಈಜುತ್ತಾ ದಡ ಸೇರಿದ್ದಾರೆ. ಘಟನೆಗೆ ನಿಖರವಾದ ಕಾರಣ ಇನ್ನೂ ಬಹಿರಂಗವಾಗಿಲ್ಲ. ಡೋಲ್ಸ್ ವೆಂಟೊದ ತಾಂತ್ರಿಕ ತಪಾಸಣೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಹಡಗುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.