RCB: ಅಭಿಮಾನಿಗಳಿಗಾಗಿ RCB ಯಿಂದ ವಿಶೇಷ ಪ್ರಣಾಳಿಕೆ ಬಿಡುಗಡೆ !!

RCB: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯಭೇರಿ ಬಾರಿಸಿದರು ಕೂಡ ಅದೊಂದು ಕರಾಳ ದಿನವಾಗಿ ಉಳಿದುಕೊಂಡು ಬಿಟ್ಟಿತು. ಕಾರಣ ಎಲ್ಲರಿಗೂ ತಿಳಿದಂತೆ ಬೆಂಗಳೂರಿನಲ್ಲಿ ನಡೆದ RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಅಸುನೀಗಿದ್ದು. ಈ ಘಟನೆಯಿಂದಾಗಿ ಇದುವರೆಗೂ ಸೈಲೆಂಟ್ ಆಗಿದ್ದ ಆರ್‌ಸಿಬಿ ಇದೀಗ ಮತ್ತೆ ತನ್ನ ಅಭಿಮಾನಿಗಳ ಬಳಿಗೆ ಬಂದಿದೆ. ಇತ್ತೀಚಿಗಷ್ಟೇ ಬಾವುಕ ಪೋಸ್ಟ್ ಹಂಚಿಕೊಂಡಿದ್ದ ಆರ್ಸಿಬಿ ಇದೀಗ ತನ್ನ ಅಭಿಮಾನಿಗಳಿಗಾಗಿ ಪ್ರಣಾಳಿಕೆಯೊಂದನ್ನು ಮುಂದೆ ಇಟ್ಟಿದೆ.

ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು “ಆರ್‌ಸಿಬಿ ಕೇರ್ಸ್” ಮೂಲಕ ಒಂದಷ್ಟು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಲಿದೆ. ಇದು ಕೇವಲ ಅಲ್ಪಾವಧಿಯ ಅಭಿಯಾನವಲ್ಲ. ಬದಲಾಗಿ ದೀರ್ಘಾವಧಿಯ ಭರವಸೆ ಎಂದು ಆರ್ಸಿಬಿ ಹೇಳಿಕೊಂಡಿದೆ. ಈ ಅಭಿಯಾನಕ್ಕಾಗಿ ಆರ್ಸಿಬಿ 6 ಅಂಶಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಮುಂದಿಟ್ಟಿದೆ.
‘ಹಣಕಾಸಿನ ನೆರವನ್ನು ಮೀರಿ ಬೆಂಬಲವನ್ನು ಒದಗಿಸುವುದು. ಎರಡನೆಯದಾಗಿ, ಅದು ‘ಉತ್ತಮ ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ಗಳನ್ನು ವಿನ್ಯಾಸಗೊಳಿಸಲು ಕ್ರೀಡಾಂಗಣದ ಅಧಿಕಾರಿಗಳು, ಕ್ರೀಡಾ ಸಂಸ್ಥೆಗಳು ಮತ್ತು ಲೀಗ್ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು’ ಬಯಸುತ್ತದೆ.
ಫ್ರಾಂಚೈಸಿಯು ‘ಅಭಿಮಾನಿ-ಸುರಕ್ಷತಾ ಆಡಿಟ್ ಚೌಕಟ್ಟ’ನ್ನು ಸಹ ಭರವಸೆ ನೀಡುತ್ತಿದೆ. ಜೊತೆಗೆ ವಾರ್ಷಿಕವಾಗಿ ಆನ್-ಗ್ರೌಂಡ್ ಪಾಲುದಾರರಿಗೆ ಜನಸಂದಣಿ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆಯ ಕುರಿತು ತರಬೇತಿ ನೀಡುತ್ತದೆ.
ಇದರ ಜೊತೆಗೆ, ತಂಡವು ‘ನೈಜ ಅವಕಾಶಗಳೊಂದಿಗೆ ಸಮುದಾಯಗಳನ್ನು ಸಬಲೀಕರಣಗೊಳಿಸಲು’ ಮತ್ತು ‘ಜನಸಂದಣಿಯ ಸುರಕ್ಷತೆ ಕುರಿತು ಸ್ವತಂತ್ರ ಸಂಶೋಧನೆಯಲ್ಲಿ ಹೂಡಿಕೆ ಮಾಡಲು’ ಕೆಲಸ ಮಾಡುತ್ತದೆ.
‘ಅಭಿಮಾನಿಗಳ ಸ್ಮರಣೆಯನ್ನು ಶಾಶ್ವತವಾಗಿ ಹೆಚ್ಚಿಸುವುದು’ ಮತ್ತು ‘ಕ್ರೀಡಾಂಗಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಸ್ಥಳೀಯ ಪ್ರತಿಭೆಗಳನ್ನು ಪೋಷಿಸುವುದು’.
ಫ್ರಾಂಚೈಸಿ ಪ್ರಕಾರ, ‘ಆರ್‌ಸಿಬಿ ಕೇರ್ಸ್’ ಎನ್ನುವುದು ಅಭಿಮಾನಿಗಳ ಕಲ್ಯಾಣದೊಂದಿಗೆ ನಿಕಟವಾಗಿ ತೊಡಗಿಸಿಕೊಳ್ಳುವ ದೀರ್ಘಾವಧಿಯ ಯೋಜನೆಯಾಗಿದೆ.
Comments are closed.