Uttar pradesh: ಮದುವೆ ಆಗಿ ಒಂದೇ ವರ್ಷದಲ್ಲಿ ಕಾಣೆಯಾದ ಪತಿ 7 ವರ್ಷದ ನಂತರ ರೀಲ್ಸ್ ನಲ್ಲಿ ಪತ್ತೆ!

Share the Article

Uttar pradesh: ಮದುವೆಯಾಗಿ ಒಂದೇ ವರ್ಷಕ್ಕೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ ಏಳು ವರ್ಷಗಳ ನಂತರ ಇನ್ಸ್ಟಾ ಗ್ರಾಮ್ ರೀಲ್ಸ್ ನಲ್ಲಿ ಬೇರೊಬ್ಬ ಮಹಿಳೆಯ ಜೊತೆಗೆ ಕಾಣಿಸಿಕೊಳ್ಳುವ ಮೂಲಕ ಮೊದಲ ಪತ್ನಿಗೆ ಶಾಕ್ ನೀಡಿದ್ದಾನೆ. ಇದೀಗ ಮೊದಲ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪತಿ ಅರೆಸ್ಟ್ ಆಗಿದ್ದಾನೆ.

ಕಳೆದ 2017 ರಲ್ಲಿ ಉತ್ತರ ಪ್ರದೇಶದ (Uttar pradesh) ಹಾರ್ದೋಯ್‌ನ ಅಟಮೌ ಗ್ರಾಮದ ಜಿತೇಂದ್ರ ಕುಮಾರ್ ಅವರು ಮುರಾರ್‌ನಗರದ ಶೀಲು ಅವರನ್ನು ವಿವಾಹವಾಗಿದ್ದಾರೆ. ಮದುವೆಯಾದ ಒಂದೇ ವರ್ಷಕ್ಕೆ ಮಗು ಕೂಡ ಆಗಿದೆ ಇದಾದ ಕೆಲವೇ ಸಮಯದಲ್ಲಿ ಏಪ್ರಿಲ್ 2018 ರಲ್ಲಿ ಜಿತೇಂದ್ರ ಇದ್ದಕಿದ್ದಂತೆ ನಾಪತ್ತೆಯಾಗಿದ್ದ ಪತ್ನಿ ಶೀಲು ಹಾಗೂ ಮನೆಯವರು ಹುಡುಕಾಡಿದರೂ ಎಲ್ಲೂ ಪತ್ತೆಯಾಗಲಿಲ್ಲ, ಇದರಿಂದ ಗಾಬರಿಗೊಂಡ ತಂದೆ ನಾಪತ್ತೆಯಾಗಿರುವ ಕುರಿತು ಪೊಲೀಸ್‌

ದೂರು ಕೂಡಾ ನೀಡಲಾಗಿತ್ತು.

ಇನ್ನು ಮದುವೆಯಾದ ಬೆನ್ನಲ್ಲೇ ಪತಿ ಹಾಗೂ ಮನೆಯವರು ಪತ್ನಿ ಶೀಲು ಗೆ ವರದಕ್ಷಿಣೆ ಕಿರುಕುಳ ನೀಡುತಿದ್ದರು ಎಂದು ಆರೋಪಿಸಲಾಗಿದ್ದು ಈ ಘಟನೆಗೆ ಸಂಬಂಧಿಸಿ ಪೊಲೀಸ್‌ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವ ವೇಳೆಯೇ ಪತಿ ನಿಗೂಢವಾಗಿ ನಾಪತ್ತೆಯಾಗಿದ್ದ ಎನ್ನಲಾಗಿದೆ.

ಇದೀಗ ಪತ್ನಿ ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಲುಧಿಯಾನದಲ್ಲಿ ಆರೋಪಿ ಜಿತೇಂದ್ರನನ್ನು ಬಂಧಿಸಿ ಕರೆತಂದು ವಿಚಾರಣೆ ನಡೆಸಿದ ವೇಳೆ ತಾನು ಲುಧಿಯಾನದಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿ ಜೀವನ ನಡೆಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರ ವಶದಲ್ಲಿರುವ ಜಿತೇಂದ್ರನ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Comments are closed.