Toll free call: ಹೀಗೂ ನಡೆಯುತ್ತೆ ಟೋಲ್ ಫ್ರಿ ಕಾಲ್ ಸ್ಕ್ಯಾಮ್!

Toll free call: ಟೋಲ್ ಫ್ರಿ ಕಾಲ್ (Toll free call) ಸ್ಕ್ಯಾಮ್ ಅನ್ನೊದು ಯಾವ ರೀತಿ ನಡೆಯುತ್ತೆ ಅನ್ನೋದಕ್ಕೆ ಇದೇ ಉದಾಹರಣೆ ಆಗಿದೆ. ವ್ಯಕ್ತಿ ಒಬ್ಬರು ಮನೆಯಲ್ಲಿ ಬಳಸುವ ನೀರು ಶುದ್ದೀಕರಿಸುವ ಯಂತ್ರದ ದುರಸ್ತಿಗಾಗಿ ಆನ್‌ಲೈನ್‌ನಲ್ಲಿ ದೊರೆತ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಬರೋಬ್ಬರಿ ₹95 ಸಾವಿರ ಕಳೆದುಕೊಂಡಿದ್ದಾರೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ. 23ರಂದು ‘ಆನ್‌ಲೈನ್‌ನಲ್ಲಿ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದಾಗ ತಮ್ಮ ಕಂಪನಿಯ ಪ್ರತಿನಿಧಿ ಸಂಪರ್ಕಿಸುವುದಾಗಿ ಹೇಳಿದ್ದರು. ಕೆಲ ದಿನಗಳ ನಂತರ ಆ ವ್ಯಕ್ತಿ ಕರೆ ಮಾಡಿದ. ತನ್ನನ್ನು ಕಂಪನಿಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ. ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಹೇಳಿದರು. ಅದಕ್ಕಾಗಿ ಒಂದು ಲಿಂಕ್ ಅನ್ನೂ ಕಳುಹಿಸಿದರು. ಇನ್‌ಸ್ಟಾಲ್ ಆಗುತ್ತಿದ್ದಂತೆ, ಅನಧಿಕೃತ ಯುಪಿಐ ಕ್ರಿಯಾಶೀಲವಾಗಿ, ಖಾತೆಯಲ್ಲಿದ್ದ ₹95 ಸಾವಿರವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕಾಗಿ ಬಳಸಿದ ಟೋಲ್ ಫ್ರೀ ಸಂಖ್ಯೆ ನಕಲಿ ಮತ್ತು ಸೈಬರ್ ವಂಚಕರು ಬಳಸಿದ್ದು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪತ್ತನಂತಿಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ನೋಂದಾಯಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
Mahesh Shetty Timarodi: ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ!
Comments are closed.