Drone strike: ಉಕ್ರೇನ್‌ನ ಅತಿದೊಡ್ಡ ಹಡಗಿನ ಮೇಲೆ ರಷ್ಯಾ ದಾಳಿ – ಕ್ಷಣಾರ್ಧದಲ್ಲಿ ನೀರಲ್ಲಿ ಮುಳುಗಿದ ಹಡಗು ವಿಡಿಯೋ ಬೆಳಕಿಗೆ

Drone strike: ರಷ್ಯಾ-ಉಕ್ರೇನ್ ಯುದ್ಧ ನಿಲ್ಲುತ್ತಿಲ್ಲ. ಶಾಂತಿ ಮಾತುಕತೆಯ ನಡುವೆ, ರಷ್ಯಾ, ಉಕ್ರೇನಿಯನ್ ನೌಕಾಪಡೆಯ ಅತಿದೊಡ್ಡ ಹಡಗು ‘ಸಿಮ್ಫೆರೊಪೋಲ್’ ಮೇಲೆ ಸಮುದ್ರ ಡ್ರೋನ್ ಮೂಲಕ ದಾಳಿ ಮಾಡಿದೆ. ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಈ ಹಡಗು ರೇಡಿಯೋ ಮತ್ತು ಎಲೆಕ್ಟ್ರಾನಿಕ್ ಕಣ್ಗಾವಲುಗಾಗಿ ನಿರ್ಮಿಸಲ್ಪಟ್ಟಿದ್ದು, ಡ್ಯಾನ್ಯೂಬ್ ನದಿ ಮುಖಜ ಭೂಮಿಯಲ್ಲಿ ಮುಳುಗಿದೆ.

ಉಕ್ರೇನಿಯನ್ ನೌಕಾಪಡೆಯ ವಿಚಕ್ಷಣ ಹಡಗು ‘ಸಿಮೈರೊಪೋಲ್’ ಡೋನ್ ದಾಳಿಯಲ್ಲಿ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಹಡಗು 10 ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಉಕ್ರೇನ್ ನಿಯೋಜಿಸಿದ ಅತಿದೊಡ್ಡ ಹಡಗು ಎಂದು ವರದಿಯಾಗಿದೆ. “ದಾಳಿಯ ನಂತರದ ಪರಿಣಾಮಗಳನ್ನು ಪರಿಹರಿಸಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಉಕ್ರೇನಿಯನ್ ಅಧಿಕಾರಿಯೊಬ್ಬರು ದಾಳಿಯನ್ನು ದೃಢಪಡಿಸಿದ್ದಾರೆ.
ಡೋನ್ ದಾಳಿಯಲ್ಲಿ ಮುಳುಗಿದ ಉಕ್ರೇನಿಯನ್ ನೌಕಾಪಡೆಯ ಹಡಗಿನ ವಿಡಿಯೋವೊಂದು ಬೆಳಕಿಗೆ ಬಂದಿದೆ.
MOMENT Ukrainian recon ship BLASTED by Russian boat drone
Crew jump behind cover but it’s too late
'Simferopol' sinking confirmed https://t.co/6XsRbk23Lz pic.twitter.com/iQNY1uJRn9
— RT (@RT_com) August 28, 2025
ರಷ್ಯಾದ ಸುದ್ದಿ ಸಂಸ್ಥೆ TASS ವರದಿಯ ಪ್ರಕಾರ, ಈ ಘಟನೆಯು ಉಕ್ರೇನಿಯನ್ ನೌಕಾಪಡೆಯ ಹಡಗು ಸಮುದ್ರ ಡ್ರೋನ್‌ನಿಂದ ನಾಶವಾದ ಮೊದಲ ಘಟನೆಯಾಗಿದೆ. ಏತನ್ಮಧ್ಯೆ, ಹಡಗಿನ ಮೇಲೆ ದಾಳಿ ನಡೆಸಲಾಗಿದ್ದು, ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ದೃಢಪಡಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಹೆಚ್ಚಿನ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಮತ್ತು ಕೆಲವರು ಇನ್ನೂ ಕಾಣೆಯಾಗಿದ್ದಾರೆ ಎಂದು ಉಕ್ರೇನಿಯನ್ ನೌಕಾಪಡೆ ತಿಳಿಸಿದೆ.
Comments are closed.