Ajay Rai: ‘RSS ಹೆಂಡತಿ ಸತ್ತ ಗಂಡಂದಿರ ಸೈನ್ಯ’ – ಕಾಂಗ್ರೆಸ್ ನಾಯಕನಿಂದ ವಿವಾದ!!

Ajay Rai : ಮೋಹನ್ ಭಾಗವತ್ಗೆ ತೆಗಳೋ ಭರದಲ್ಲಿ ಕಾಂಗ್ರೆಸ್ ನಾಯಕನೊಬ್ಬ ‘ಆರ್‌ಎಸ್‌ಎಸ್ ವಿಧುರರ ಸೈನ್ಯ’ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ (Ajay Rai) ಆರ್‌ಎಸ್‌ಎಸ್(RSS) ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆ ಮೋಹನ್ ಭಾಗವತ್ ಅವರು ‘ಸರಿಯಾದ ವಯಸ್ಸಿನಲ್ಲಿ ಮದುವೆಯಾಗಿ ಮೂರು ಮಕ್ಕಳನ್ನು ಹೆರುವುದರಿಂದ, ಪೋಷಕರು ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿರುತ್ತಾರೆ. ಮೂವರು ಒಡಹುಟ್ಟಿದವರಿರುವ ಮನೆಗಳಲ್ಲಿರುವ ಮಕ್ಕಳು ಸಹ ಜೀವನ ನಿರ್ವಹಣೆಯನ್ನು ಕಲಿಯುತ್ತಾರೆ ಮತ್ತು ಭವಿಷ್ಯದಲ್ಲಿ ಅವರ ಕುಟುಂಬ ಜೀವನದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಸೂಚ್ಯವಾಗಿ ಹೇಳಿದ್ದರು.
ಮೋಹನ್ ಭಾಗವತ್ ಸಲಹೆ ಬಗ್ಗೆ ಮಾತಾಡಿದ ಅಜಯ್ ರೈ, ‘ಆರ್‌ಎಸ್‌ಎಸ್ ವಿಧುರೋ ಕಿ ಫೌಜ್’ ಎಂದು ಹೇಳಿದರು. ‘ಆರ್‌ಎಸ್‌ಎಸ್ ಸದಸ್ಯರು ಅವಿವಾಹಿತರಾಗಿರುವಾಗ ಕೌಟುಂಬಿಕ ವಿಷಯಗಳಲ್ಲಿ ಹೇಗೆ ಸಲಹೆ ನೀಡುತ್ತಾರೆ’ ಎಂದು ಹೇಳಿ ಈ ರೀತಿ ವಿವಾದ ಸೃಷ್ಟಿಸಿದ್ದಾರೆ.
Rupee: ಡಾಲರ್ ಎದುರು ರೂಪಾಯಿ ಮೌಲ್ಯ 87.965 ರೂ ಇಳಿಕೆ – ಇತಿಹಾಸದಲ್ಲೇ ದಾಖಲೆಯ ಕುಸಿತ !!
Comments are closed.