Bengaluru : ಹುಡುಗರೇ ಹುಷಾರ್.. !! ಹುಡುಗಿಯರ ಛೂ ಬಿಟ್ಟು ಹಣ ಪೀಕುತ್ತಿವೆ ರೆಸ್ಟೋರೆಂಟ್ಗಳು !!

Bengaluru: ಬ್ಯೂಟಿಫುಲ್ ಗರ್ಲ್ ಒಬ್ಬಳು ಆನ್ ಲೈನ್ ನಲ್ಲಿ ಚಾಟಿಂಗ್ ಗೆ ಅಕಸ್ಮಾತ್ತಾಗಿ ಸಿಕ್ಕಿ ಬಿಡುತ್ತಾಳೆ. ನ್ಯಾಚುರಲೀ, ಅವಳು ಚಂದ ಕಾಣಿಸುತ್ತಾಳೆ. ಇವನು ಆಕೆಯ ಪ್ರೊಫೈಲ್ ನ್ನು ಲೈಕ್ ಮಾಡುತ್ತಾನೆ. ಅವಳು accept ಮಾಡಿದರೆ, ಮುಂದೆ ಶೀಘ್ರದಲ್ಲಿ ಒಂದು ಸುಂದರ, ಮಸುಕು ಕತ್ತಲಿನ ರೆಸ್ಟೋರೆಂಟ್ ನಲ್ಲಿ ಪಾನೀಯ ಭರಿತ ಊಟಕ್ಕೆ ಆಕೆಯ ಜತೆ ಕೂರದೇ ಇರೋದು ಅನ್ ಲೈಕ್ಲಿ!

ಆದರೆ ಆತನಿಗೆ ಗೊತ್ತಿಲ್ಲ; ತನ್ನೆದುರು ಕುಳಿತು ಸಣ್ಣಗೆ ನಗುತ್ತಾ ಬಿಯರ್ ಹೀರುವ ಈ ಹುಡುಗಿ ತಾನು ಹೋಗಿ ಕುಡಿದು, ಉಂಡು ಬರುವ ಈ ಹೋಟೆಲ್ ನ ಓರ್ವ ಸೇಲ್ಸ್ ಕಂ ಮಾರ್ಕೆಟಿಂಗ್ ಗರ್ಲ್ ಅಂತ. ಈ ವಿಷಯ ಆತನಿಗೆ ಗೊತ್ತಾಗುವುದರ ಒಳಗೆ ಆತ ಲಕ್ಷಾಂತರ ರೂಪಾಯಿಗಳನ್ನು ಹೋಟೆಲಿಗೆ ಸುರಿದಿರುತ್ತಾನೆ. ಆ ಬಿಲ್ಲಿನಲ್ಲಿ 20% ಹಣ ಆಕೆಯ ವ್ಯಾನಿಟಿ ಬ್ಯಾಗ್ ಸೇರಿರುತ್ತದೆ.
ಹೌದು, ಇಂಥದೊಂದು ವಂಚನೆ ಇದೀಗ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹುಡುಗಿಯರಿಬ್ಬರು ತಮ್ಮ ಇನ್ಸ್ಟಾಗ್ರಾಮ್ ಪೇಜಿನಲ್ಲಿ ವಿಷಯ ಬಿಚ್ಚಿಟ್ಟಿದ್ದು ಈ ಸಂಬಂಧಿ ಪೋಸ್ಟ್ ಈಗ ವೈರಲ್ ಆಗಿದೆ.
ಹಾಗಂತ ಈ ಮಾರ್ಕೆಟಿಂಗ್ ಕಾನ್ಸ್ಪೆಪ್ಟ್ ಹೊಸದೇನೂ ಅಲ್ಲ. ಈ ಹಿಂದೆ ಕೂಡಾ ಬಾರ್ ಗರ್ಲ್ಸ್ ಗಳು ಕುಡಿಯಲು ಹೋಗುವ ಗಿರಾಕಿಗಳಿಗೆ ಸಾಥ್ ನೀಡುತ್ತಿದ್ದರು. ಈಗ ಈ ಕೆಲಸಕ್ಕೆ ಹೊರಗಿನ ಕಾಲೇಜು ವಿದ್ಯಾರ್ಥಿನಿಯರನ್ನು ರೆಸ್ಟೋರೆಂಟ್ ಗಳು ಬಳಸಿಕೊಳ್ಳುತ್ತಿವೆ. ಮೋಹದ ಬಲೆಯಲ್ಲಿ ಬಿದ್ದ ಮಿಕ ವಿಲವಿಲ.
ಈಗಿನ ಹೈಫೈ ವೈಫೈ ಹುಡುಗಿಯರಿಗೆ ಮಜಾ ಮಾಡಲು ದುಡ್ಡು ಸಿಕ್ಕರೆ ಸಾಕು, ಅವರು ಏನು ಮಾಡಲೂ ಹೇಸುವುದಿಲ್ಲ. ಅಂಥವರನ್ನೆ ಈಗ ರೆಸ್ಟೋರೆಂಟ್ಗಳು ಹೈಯರ್ ಮಾಡಿಕೊಳ್ಳುತ್ತಿವೆ. ಇಫ್ ಮನಿ ಕಮ್ಸ್ ಫಾರ್ವರ್ಡ್, ಎವರಿಥಿoಗ್ ವಿಲ್ ಗೋ ಬ್ಯಾಕ್ವರ್ಡ್ ಅನ್ನುವ ಮನಸ್ಥಿತಿಯ ಹುಡುಗಿಯರು ಕೈತುಂಬಾ ದುಡ್ಡು ದುಡಿಯಲು ದೊಡ್ಡ ಕೆಲಸವನ್ನೇನೂ ಮಾಡಬೇಕಾಗಿಲ್ಲ. ಡೇಟಿಂಗ್ ಆಯಪ್ನಲ್ಲಿ ತಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿಕೊಂಡು ಡೇಟಿಂಗ್ಗೆ ಆಸೆ ಪಡುವ ದೊಡ್ಡ ಕುಳಗಳನ್ನು ಅಥವಾ ತೆವಲಿಗಾಗಿ ಕೈಬಿಚ್ಚಿ ಖರ್ಚು ಮಾಡಲು ರೆಡಿಯಾಗೋ ಸದಾ ಅತೃಪ್ತ ಗಂಡು ಜೀವಿಗಳನ್ನು ಬಲೆಗೆ ಬೀಳಿಸಿಕೊಂಡರೆ ಸಾಕು, ಅಷ್ಟೇ. ಉಳಿದದ್ದು ಆತನೇ ಮಾಡುತ್ತಾನೆ. ಆಕೆಯನ್ನು ಡೇಟಿಂಗ್ ನೆಪದಲ್ಲಿ ರೆಸ್ಟೋರೆಂಟ್ಗೆ ಕರೆಯುತ್ತಾನೆ. ಆಕೆ ಆಗ ತನ್ನನ್ನು ನೇಮಿಸಿದ ಹೋಟೆಲ್ ಅನ್ನು ಸೂಚಿಸುತ್ತಾಳೆ, ಅಲ್ಲಿ ತುಂಬಾ ಆಸೆ ಯಾರು ನೋಡಲ್ಲ ಎಂದು ಕಣ್ಣು ಮಿಟುಕಿಸುತ್ತಾಳೆ. ಅಲ್ಲಿಗೆ ಆತ ಫುಲ್ ಫ್ಲಾಟ್!
ಹೀಗೆ ಆತನೊಂದಿಗೆ ರೆಸ್ಟೋರೆಂಟ್ ಗೆ ಹೋದ ಹುಡುಗಿ ನನಗೆ ಬೇಕಿದ್ದನ್ನು ಬೇಡದ್ದನ್ನು ಆರ್ಡರ್ ಮಾಡುತ್ತಾಳೆ. ಎಲ್ಲವನ್ನು ಒಂದೆರಡು ಸ್ಪೂನ್ ರುಚಿ ನೋಡಿ, ತಿಂದ ಹಾಗೆ ಮಾಡಿ ಬದಿಗೆ ಸರಿಸುತ್ತಾಳೆ. ಮತ್ತೆ ಮತ್ತೆ ಹೊಸ ಮೆನುಗಳನ್ನು ಹುಡುಕಾಡಿ ಆರ್ಡರ್ ಮಾಡುತ್ತಲೇ ಹೋಗುತ್ತಾಳೆ.
ಮಧ್ಯೆ ಮಧ್ಯೆ ಒಂದೆರಡು ಸಿಪ್ ಬಿಯರ್ ಚಪ್ಪರಿಸಿದರೂ ಆಕೆ ಎಚ್ಚರವಾಗೆ ಇರ್ತಾಳೆ. ಆಕೆಯ ಟಾಸ್ಕ್ ಆದಷ್ಟು ಹೊತ್ತು ಆತನನ್ನು ರೆಸ್ಟೋ ರೆಂಟ್ ನ ಒಳಗೆ ಇರಿಸಿಕೊಳ್ಳೋದು ಮತ್ತು ಆತನಿಂದ ಐಟಂ ಖರ್ಚು ಮಾಡಿಸೋದು!
ಇದೀಗ ಬೆಂಗಳೂರಿನಲ್ಲಿ ಇಂಥಹಾ ವಿಚಿತ್ರ ವಂಚನೆಯ ಪ್ರಕರಣ ಒಂದು ಬೆಳಕಿಗೆ ಬಂದಿದ್ದು ಪುರುಷರನ್ನು ಮೋಸ ಮಾಡುವುದಕ್ಕಾಗಿಯೇ ಸುಂದರ ಕಾಲೇಜು ಹುಡುಗಿಯರನ್ನು ರೆಸ್ಟೋರೆಂಟ್ಗಳು, ಬಾರ್ಗಳು ಛೂ ಬಿಡುತ್ತಿರುವುದು ಕಂಡುಬಂದಿದೆ.
ಹುಡುಗರು ಕಕ್ಕುವ ಬಿಲ್ಲುಗೆ ಅನುಗುಣವಾಗಿ ಸುಮಾರು ಶೇಕಡಾ 20ರಷ್ಟು ಟಿಪ್ಸ್ ಹುಡುಗಿಯರಿಗೆ ಕೊಡಲಾಗುತ್ತದೆ. ಅಂದರೆ 50 ಸಾವಿರ ಬಿಲ್ ಮಾಡಿದ್ರೆ, 20 ಸಾವಿರ ಹುಡುಗಿಯರಿಗೆ. ಇಂಥ ರೆಸ್ಟೋರೆಂಟ್ಗೆ ಹೋದ್ರೆ ಕನಿಷ್ಠ 50 ಸಾವಿರ ಬಿಲ್ ಆಗೇ ಆಗುತ್ತದೆ. ಆದ್ದರಿಂದ ಯುವಕರೇ ಎಚ್ಚರ ಎಚ್ಚರ!
View this post on Instagram
Ajay Rai: ‘RSS ಹೆಂಡತಿ ಸತ್ತ ಗಂಡಂದಿರ ಸೈನ್ಯ’ – ಕಾಂಗ್ರೆಸ್ ನಾಯಕನಿಂದ ವಿವಾದ!!
Comments are closed.