Ganesha Chaturti: ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದು ಯಾಕೆ?

Ganesha chaturti: ಶಾಸ್ತ್ರ, ಪುರಾಣಗಳ ಪ್ರಕಾರ ಭಾದ್ರಪದ ಶುಕ್ಲದ ಚೌತಿ ಅಂದರೆ ಗಣೇಶ ಚತುರ್ಥಿಯಂದು (Ganesha chaturti) ಚಂದ್ರನನ್ನು ನೋಡಿದರೆ ಅಶುಭ ಅನ್ನುವ ಮಾತಿದೆ. ಈ ದಿನ ಗಣೇಶ ಚಂದ್ರನನ್ನು ಶಪಿಸಿದ್ದನು ಹಾಗೂ ಚಂದ್ರನನ್ನು ನೋಡುವವರೆಲ್ಲರಿಗೂ ಚಂದ್ರ ದೋಷ ಆಗುತ್ತದೆ ಅನ್ನುವ ನಂಬಿಕೆ ಇದೆ.

ಪೌರಾಣಿಕ ಹಿನ್ನೆಲೆ ಪ್ರಕಾರ, ಒಮ್ಮೆ ಗಣೇಶ ಮತ್ತು ಚಂದ್ರ ಸಂಧಿಸುತ್ತಾರೆ. ಆಗ ಗಣೇಶನು ಇಲಿಯ ಮೇಲೆ ಸವಾರಿ ಮಾಡುತ್ತಿದ್ದನು. ತನ್ನ ಸೌಂದರ್ಯದ ಬಗ್ಗೆ ಹೆಮ್ಮೆಪಟ್ಟು ಚಂದ್ರನು ಗಣೇಶನ ರೂಪದ ಬಗ್ಗೆ ಅಪಹಾಸ್ಯ ಮಾಡಿ ನಗುತ್ತಾನೆ. ಇದರಿಂದ ಕೋಪಗೊಂಡ ಗಣೇಶನು ನಿನ್ನ ಮೋಡಿ ಮತ್ತು ತೇಜಸ್ಸು ನಾಶವಾಗಲಿ ಎಂದು ಶಪಿಸುತ್ತಾನೆ. ಈ ಶಾಪವು ಬ್ರಹ್ಮಾಂಡವನ್ನು ಬೆಚ್ಚಿ ಬೀಳಿಸುತ್ತದೆ. ತನ್ನ ತಪ್ಪನ್ನು ಅರಿತ ಚಂದ್ರ ದೇವನು ಗಣೇಶನಲ್ಲಿ ಕ್ಷಮೆಯಾಚಿಸುತ್ತಾನೆ. ಅವನ ಪಶ್ಚಾತಾಪಕ್ಕೆ ಮನಸೋತ ಗಣೇಶನು, ಶಾಪವನ್ನು ಕಡಿಮೆ ಮಾಡಲು ಗಣೇಶ ಚತುರ್ದಶಿಯಂದು ಪೂರ್ಣ ಭಕ್ತಿಯಿಂದ ಉಪವಾಸ ಆಚರಿಸಲು ಸೂಚಿಸಿದನು. ಅಂದಿನಿಂದ ಗಣೇಶ ಚತುರ್ಥಿಯಂದು ಚಂದ್ರನು ಶಾಪಗ್ರಸ್ತನಾಗಿರುತ್ತಾನೆ ಎಂದು ನಂಬಿ ಜನರು ಅದನ್ನು ನೋಡುವುದನ್ನು ತಪ್ಪಿಸುತ್ತಾರೆ.
Comments are closed.