America: ಟ್ರಂಪ್ ತೆರಿಗೆ ಹುಚ್ಚಾಟ – 10 ರೂ. ಪಾರ್ಲೆ-ಜಿ ಬಿಸ್ಕೆಟ್ ಈಗ ಈಗ 370 ರೂಪಾಯಿ !!

Share the Article

America: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಸುಂಕ ಹೆಚ್ಚಿಸಿದ ಪರಿಣಾಮ, ಅಲ್ಲಿನ ಭಾರತೀಯರಿಗೆ ಜೀವನ ತುಂಬಾ ದುಬಾರಿಯಾಗಿಬಿಟ್ಟಿದೆ. ಉದಾಹರಣೆಗೆ ಹೇಳುವುದಾದರೆ ರೂ.10 ಪಾರ್ಲೆ-ಜಿ ಬಿಸ್ಕೆಟ್ ಬೆಲೆ ಇದೀಗ 300 ಗಡಿ ದಾಟಿದೆ.

ಯಸ್, ಈ ಹಿಂದೆ ಶೇಕಡಾ 25ರಷ್ಟು ಇದ್ದ ಸುಂಕವನ್ನು ಈಗ ಶೇಕಡಾ 50ಕ್ಕೆ ಏರಿಸುವ ಘೋಷಣೆ ಮಾಡಲಾಗಿದೆ. ಈ ಹೊಸ ಸುಂಕ ಇನ್ನೂ ಜಾರಿಯಾಗಿಲ್ಲವಾದರೂ, ಈಗಾಗಲೇ ಇರುವ ಸುಂಕದಿಂದಲೇ ಅಮೆರಿಕದಲ್ಲಿ ಭಾರತೀಯ ವಸ್ತುಗಳ ಬೆಲೆಗಳು ತೀವ್ರವಾಗಿ ಏರಿವೆ. ಅಮೆರಿಕದಲ್ಲಿ ವಾಸಿಸುವ ಭಾರತೀಯರ ದಿನಬಳಕೆ ವಸ್ತುಗಳಿಂದ ಹಿಡಿದು ಬಿಸ್ಕತ್ತುಗಳವರೆಗೂ ಎಲ್ಲವೂ ಕಾಸ್ಟ್ಲಿ ಆಗಿದೆ.

ಬೆಲೆಗಳಲ್ಲಿ ಕಂಡುಬಂದ ಏರಿಕೆ:

* ಭಾರತದಲ್ಲಿ ₹10ಕ್ಕೆ ಸಿಗುವ ಪಾರ್ಲೆ-ಜಿ ಬಿಸ್ಕತ್ತು ಅಮೆರಿಕದಲ್ಲಿ ₹370

* ಹಲ್ದಿರಾಮ್ ತಿಂಡಿಗಳು, ಮಸಾಲೆಗಳು ತಲಾ ₹300ಕ್ಕೂ ಹೆಚ್ಚು

* ₹20 ಮೌಲ್ಯದ ಹೈಡ್ ಆಂಡ್ ಸೀಕ್ ಬಿಸ್ಕತ್ತು ಅಮೆರಿಕದಲ್ಲಿ ₹320

* ಅರ್ಧ ಕೆಜಿ ಬೇಳೆಕಾಳುಗಳು ಸುಮಾರು ₹400

Bihar: ಊರಿಗೆ ಬಂದ ಸಚಿವರು, ಶಾಸಕರ ಮೇಲೆ ಗ್ರಾಮಸ್ಥರಿಂದ ಹಲ್ಲೆ – 1 ಕಿ. ಮೀ ಓಡಿ ಜೀವ ಉಳಿಸಿಕೊಂಡ ನಾಯಕರು!!

Comments are closed.