DELHI POLICE: ‘ಅತ್ಯಂತ ಶಕ್ತಿಯ ಸ್ಫೋಟಕ ಇಡಲಾಗಿದೆ: ವಿದ್ಯಾರ್ಥಿಗಳು ಸ್ವಾತಂತ್ರ್ಯಕ್ಕೆ ಅರ್ಹರು’ – ದೆಹಲಿಯ 20 ಕಾಲೇಜುಗಳಿಗೆ ಬಾಂಬ್ ಬೆದರಿಕೆ

Share the Article

DELHI POLICE: ದೆಹಲಿಯ ಚಾಣಕ್ಯಪುರಿಯಲ್ಲಿರುವ ಜೀಸಸ್ ಮತ್ತು ಮೇರಿ ಕಾಲೇಜು ಸೇರಿದಂತೆ ಸುಮಾರು 20 ಕಾಲೇಜುಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿವೆ. ಪೊಲೀಸ್ ತಂಡಗಳು ತಕ್ಷಣ ಬಾಂಬ್ ಮತ್ತು ಶ್ವಾನ ದಳದೊಂದಿಗೆ ಕಾಲೇಜುಗಳನ್ನು ತಲುಪಿ ಶೋಧ ಕಾರ್ಯಾಚರಣೆ ನಡೆಸಿದವು. ಆದರೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇಮೇಲ್ ಕಳುಹಿಸಿದವರು VPN ಬಳಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಹುಡುಕಾಟದಲ್ಲಿ ಯಾವುದೇ ಅನುಮಾನಾಸ್ಪದ ವಿಷಯಗಳು ಕಂಡುಬಂದಿಲ್ಲವಾದ್ದರಿಂದ ಬೆದರಿಕೆಗಳನ್ನು ನಂತರ ಇದು ಫೇಕ್‌ ಎಂದು ಘೋಷಿಸಲಾಯಿತು ಎಂದು ಅವರು ಹೇಳಿದರು. “ಈ ವಾರ ಇಂತಹ ಇಮೇಲ್ ಬೆದರಿಕೆಗಳು ವರದಿಯಾಗುತ್ತಿರುವುದು ಇದೇ ಮೊದಲು. VPN (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಮೂಲಕ ಕಳುಹಿಸಲಾಗಿದೆ ಎಂದು ಶಂಕಿಸಲಾದ ಸಂದೇಶಗಳಲ್ಲಿ ‘ಹೈ ಪವರ್ ಸ್ಫೋಟಕಗಳು’ ಇರಿಸಲಾಗಿದೆ ಮತ್ತು ‘ವಿದ್ಯಾರ್ಥಿಗಳು ಸ್ವಾತಂತ್ರ್ಯಕ್ಕೆ ಅರ್ಹರು’ ಎಂಬಂತಹ ವಿಷಯಗಳಿವೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Anushree : ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಿರೂಪಕಿ ಅನುಶ್ರೀ!!

Comments are closed.