Tiger death: ದಕ್ಷಿಣ ಕೊಡಗಿನಲ್ಲಿ ಕಾಫಿ ತೋಟದಲ್ಲಿ ಹುಲಿ ಮೃತದೇಹ ಪತ್ತೆ – ವಯಸ್ಸಾಗಿ ಸಾವನ್ನುಪಿರುವ ಶಂಕೆ

Share the Article

Tiger death: ಇತ್ತೀಚೆಗೆ ಮಾನವ ಹಾಗೂ- ವನ್ಯ ಜೀವಿಗಳ ಸಂಘರ್ಷದಲ್ಲಿ ಅನೇಕ ಮಾನವರು ಹಾಗೂ ಪ್ರಾಣಿಗಳು ಬಲಿಯಾಗುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. ಮನುಷ್ಯರ ಜೀವಕ್ಕೆ ಎಷ್ಟು ಬೆಲೆ ಇದೆಯೋ ಪ್ರಾಣಿ-ಪಕ್ಷಿಗಳ ಜೀವಕ್ಕೂ ಅಷ್ಟೇ ಬೆಲೆ ಇದೆ.

ಇತ್ತೀಚೆಗೆ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ಸಾವಿನಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ತಾನು ಸಾಕಿದ ದನಗಳನ್ನು ಹುಲಿ ತಿಂದಿದೆ ಎಂದು ಸಿಟಗ್ಟಿಗೆದ್ದು ಮಾಲಿಕ ವಿಷವಿಟ್ಟು ಐದು ಹುಲಿಗಳ ಸಾವಿಗೆ ಕಾರಣನಾಗಿದ್ದ. ಇದೀಗ ಪೊನ್ನಂಪೇಟೆ ತಾಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟದಲ್ಲಿ ಹುಲಿ ಮೃತ ದೇಹ ಪತ್ತೆಯಾದ ಘಟನೆ ನಡೆದಿದೆ. ಆದರೆ ಇದು ವಯಸ್ಸಾಗಿದ ಕಾರಣದಿಂದ ಸಾವನ್ನುಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮತ್ತು ಅರಣ್ಯ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Heavy Rain: ಪಾಕ್, ಹಿ.ಪ್ರದೇಶದಲ್ಲಿ ಭಾರಿ ಮಳೆ: ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ : ದಿಢೀರ್ ಪ್ರವಾಹಕ್ಕೆ ಕೊಚ್ಚಿ ಹೋದ ಸೇತುವೆ, ಅಂಗಡಿಗಳು

Comments are closed.