Indian Railways: ಏರ್‌ಪೋರ್ಟ್ ಮಾದರಿಯಲ್ಲೇ ಇನ್ಮುಂದೆ ರೈಲಿಗೂ ಲಗೇಜ್ ರೂಲ್ಸ್ ಜಾರಿ!

Share the Article

Indian Railways: ವಿಮಾನ ನಿಲ್ದಾಣಗಳಲ್ಲಿ ಪಾಲಿಸುವಂತೆ ಇದೀಗ ರೈಲು ನಿಲ್ದಾಣಗಳಲ್ಲಿಯೂ ಕೂಡ ಲಗೇಜ್ ಬ್ಯಾಗ್‌ಗೆ ನಿಯಮಗಳನ್ನು ಜಾರಿಗೆ ತರಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಮೂಲಗಳ ಪ್ರಕಾರ, ಪ್ರಯಾಣಿಕರು ತಮ್ಮ ಲಗೇಜ್‌ನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗೆ ತೆಗೆದುಕೊಂಡು ಹೋಗುವ ಮುನ್ನ ಎಲೆಕ್ಟಾನಿಕ್ ತೂಕ ಮಾಡುವ ಯಂತ್ರದಲ್ಲಿ ಚೆಕ್ ಮಾಡಿಸಿಕೊಂಡು ಹೋಗಬೇಕು. ಒಂದು ವೇಳೆ ನಿಗದಿತ ತೂಕ್ಕಕಿಂತ ಹೆಚ್ಚಾದಾಗ ಅಥವಾ ಕಡಿಮೆ ತೂಕದ ದೊಡ್ಡ ಸಾಮಾನುಗಳನ್ನು ಕೊಂಡೊಯ್ಯುವುದಾದರೆ ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.

ರೈಲಿನಲ್ಲಿ ಕೊಂಡೊಯ್ಯುವ ತೂಕದ ಮಿತಿಯು ರೈಲಿನ ದರ್ಜೆಗಳ ಅನುಸಾರವಾಗಿ ಬದಲಾಗುತ್ತದೆ. ಎಸಿ ಮೊದಲನೇ ದರ್ಜೆಯಲ್ಲಿ 70 ಕೆ.ಜಿ, ಎಸಿ ಎರಡನೇ ದರ್ಜೆಯಲ್ಲಿ 50 ಕೆ.ಜಿ, ಎಸಿ ಮೂರನೇ ದರ್ಜೆ ಹಾಗೂ ಸ್ಲೀಪರ್ ಕೋಚ್‌ನಲ್ಲಿ 40 ಕೆ.ಜಿಗೆ ಅವಕಾಶವಿರುತ್ತದೆ. ಇನ್ನುಳಿದಂತೆ ಸಾಮಾನ್ಯ ದರ್ಜೆಯಲ್ಲಿ 35 ಕೆ.ಜಿ ಕೊಂಡೊಯ್ಯಬಹುದಾಗಿದೆ.

ಇನ್ನೂ ಕೆಲವು ಪುನರ್ ಅಭಿವೃದ್ಧಿಗೊಂಡ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ. ಬಟ್ಟೆ, ಪಾದರಕ್ಷೆ, ಎಲೆಕ್ಟಾನಿಕ್ಸ್‌ ಉಪಕರಣಗಳು ಸೇರಿದಂತೆ ಪ್ರಯಾಣಿಕರಿಗೆ ಅನೂಕೂಲವಾಗುವಂತಹ ವಸ್ತುಗಳು ನಿಲ್ದಾಣಗಳಲ್ಲಿಯೇ ಸಿಗಬೇಕು ಹಾಗೂ ಈ ಮೂಲಕ ರೈಲ್ವೆ ಆದಾಯವೂ ಹೆಚ್ಚಾಗುತ್ತದೆ ಎಂಬ ಉದ್ದೇಶದೊಂದಿಗೆ ಈ ನಿರ್ಧಾರ ಕೈಗೊಂಡಿದೆ. ಜೊತೆಗೆ ಇದರಿಂದ ರೈಲು ನಿರ್ಧಾರವೂ ವಿಮಾನ ನಿಲ್ದಾಣದ ಅನುಭವ ನೀಡುತ್ತದೆ.

ಆರಂಭದಲ್ಲಿ ಪ್ರಯಾಗ್‌ರಾಜ್ ಜಂಕ್ಷನ್, ಪ್ರಯಾಗರಾಜ್ ಛೋಕಿ, ಸುಬೇದರ್‌ಗಂಜ್, ಕಾನ್ಪುರ್ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಅಲಿಗಢ್ ಜಂಕ್ಷನ್, ಗೋವಿಂದಪುರಿ ಮತ್ತು ಇಟಾವಾ ಸೇರಿದಂತೆ ಎನ್‌ಸಿಆರ್ ವಲಯದ ಅಡಿಯಲ್ಲಿ ಬರುವ ರೈಲು ನಿಲ್ದಾಣಗಳಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ. ಪ್ರಯಾಣಿಕರು ತಮ್ಮ ಲಗೇಜ್‌ಗಳನ್ನು ತೂಕ ಮಾಡಿಸಿದ ನಂತರವೇ ಪ್ಲಾಟ್‌ಫಾರ್ಮ್‌ಗೆ ತೆರಳಲು ಅನುಮತಿಯಿರುತ್ತದೆ.

ಇನ್ನೂ ಪ್ರಯಾಣಿಕರ ಬಳಿ ಟಿಕೆಟ್ ಇದ್ದರೆ ಮಾತ್ರ ಪ್ಲಾಟ್‌ಫಾರ್ಮ್‌ಗೆ ತೆರಳಬಹುದು, ಪ್ರಯಾಣಿಕರಲ್ಲದೇ ಇದ್ದರೆ ಪ್ಲಾಟ್‌ಫಾರ್ಮ್ ಟಿಕೆಟ್ ಇರಲೇಬೇಕು ಎಂದು ರೈಲ್ವೆ ಇಲಾಖೆ ತಿಳಿಸಿದ್ದು, 2026ರ ಡಿಸೆಂಬರ್‌ನಿಂದು ಇದು ಅನ್ವಯಿಸಲಿದೆ ಎಂದು ಮಾಹಿತಿ ನೀಡಿದೆ.

Puttur: ಪುತ್ತೂರು:ವಿವಾಹದ ಆಮೀಷವೊಡ್ಡಿ ಲೈಂಗಿಕವಾಗಿ ಬಳಸಿ ಮಗು ಹುಟ್ಟಿದ ಪ್ರಕರಣ: ಸಂತ್ರಸ್ತೆ ಮಗು ಹಾಗೂ ಆರೋಪಿಯ ಡಿ ಎನ್ ಎ ಪರೀಕ್ಷೆ!

Comments are closed.