Home News Supreme Court : ಅಪ್ರಾಪ್ತ ಬಾಲಕ, ಬಾಲಕಿಯರ ಪ್ರೀತಿ ಅಪರಾಧವಲ್ಲ – ಸುಪ್ರೀಂ ಕೋರ್ಟ್ ಅಭಿಪ್ರಾಯ

Supreme Court : ಅಪ್ರಾಪ್ತ ಬಾಲಕ, ಬಾಲಕಿಯರ ಪ್ರೀತಿ ಅಪರಾಧವಲ್ಲ – ಸುಪ್ರೀಂ ಕೋರ್ಟ್ ಅಭಿಪ್ರಾಯ

Hindu neighbor gifts plot of land

Hindu neighbour gifts land to Muslim journalist

Supreme Court: ಅಪ್ರಾಪ್ತ ವಯಸ್ಕರ ನಡುವಿನ ನಿಜವಾದ ಪ್ರೇಮ ಸಂಬಂಧವನ್ನು ಅತ್ಯಾ*ರವೆಂದಾಗಲಿ ಅಥವಾ ಅಪರಾಧವೆಂದಾಗಲಿ ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್ ತಿಳಿಸಿದೆ.

ಪ್ರೀತಿಗೆ ಇರುವ ವಯೋಮಿತಿಯನ್ನು 18ರಿಂದ 16 ವರ್ಷಗಳಿಗೆ ಇಳಿಸುವ ಕುರಿತು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಬಿ.ವಿ. ನಾಗರತ್ನಾ ಹಾಗೂ ನ್ಯಾ. ಆರ್. ಮಹಾದೇವನ್ ಅವರ ಪೀಠ, ಪೋಕ್ಸೋ ಕಾಯ್ದೆಯ ದುರುಪಯೋಗದ ಕುರಿತು ಕಳವಳ ವ್ಯಕ್ತಪಡಿಸಿ “ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯುವಕ-ಯುವತಿಯರು ಒಟ್ಟಿಗೆ ಕಲಿಯುವಾಗ ಪರಸ್ಪರ ಭಾವನೆ ಬೆಳೆಸಿಕೊಳ್ಳುತ್ತಾರೆ. ಪ್ರೀತಿಯನ್ನು ಅಪರಾಧ ಎಂದು ಹೇಳಬಹುದೇ? ಅತ್ಯಾ*ರದ ಅಪರಾಧಕ್ಕೂ ಇದಕ್ಕೂ ವ್ಯತ್ಯಾಸವಿದೆ. ನಿಜವಾದ ಪ್ರೀತಿಯ ಸಂಬಂಧಗಳಲ್ಲಿ, ಯುವಕ-ಯುವತಿಯರು ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ಬಯಸಿದರೆ, ಅಂತಹ ಪ್ರಕರಣಗಳನ್ನು ಅಪರಾಧದಂತೆ ಪರಿಗಣಿಸಬಾರದು” ಎಂದು ಪೀಠ ತಿಳಿಸಿತು.

ಅಲ್ಲದೆ “ಹೆಣ್ಣಿನ ಪೋಷಕರು ತಮ್ಮ ಮಗಳು ಪ್ರೀತಿಸುತ್ತಿರುವ ಹುಡುಗನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ, ಜೈಲಿಗೆ ಕಳುಹಿಸುವ ಘಟನೆಗಳು ನಡೆಯುತ್ತಿವೆ. ಕೆಲವೊಮ್ಮೆ ಮಕ್ಕಳು ಓಡಿಹೋಗಿದ್ದನ್ನು ಮರೆಮಾಚಲು ಕೂಡ ಪೋಕ್ಸೋ ಅಡಿ ಪ್ರಕರಣ ದಾಖಲಿಸಲಾಗುತ್ತದೆ. ಇದು ಸಮಾಜದ ನಿಜಕ್ಕೂ ಅಘಾತಕಾರಿ ಎಂದು ಹೇಳಿತು”

Heavy Rain: ಭಾರೀ ಮಳೆ ಹಿನ್ನೆಲೆ –ದಿಡೀರ್‌ ಕುಸಿದು ಬಿದ್ದ ಮನೆ – ಪ್ರಾಣಪಾಯದಿಂದ ಪಾರು