Pratap Simha : ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ, ಆದ್ರೆ ಆ ಒಂದು ಕ್ಷೇತ್ರ ಬಿಟ್ಟು – ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ

Pratap Simha : ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಅತಂತ್ರವಾಗಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಇದೀಗ ತಮ್ಮ ಮುಂದಿನ ರಾಜಕೀಯ ಜೀವನದ ಕುರಿತು ಮಾತನಾಡಿದ್ದಾರೆ.

ಹೌದು, ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಾಪ್ ಸಿಂಹ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು “ಮೈಸೂರಿನಿಂದಲೇ (Mysuru) ರಾಜಕಾರಣ ಆರಂಭಿಸಿದ್ದೇನೆ. ಎರಡು ಬಾರಿ ಇಲ್ಲಿಂದಲೇ ಸಂಸತ್ತು ಪ್ರವೇಶಿಸಿದ್ದೇನೆ. ಹಾಗಾಗಿಯೇ ಮೈಸೂರಿನಿಂದಲೇ ವಿಧಾನಸಭಾ ಚುನಾವಣೆಗೆ ಸ್ಪರ್ಧೆ (Assembly Election) ಮಾಡುತ್ತೇನೆ. ಮೈಸೂರಿನ ನಾಲ್ಕು ಕ್ಷೇತ್ರಗಳಿದ್ದು, ಒಂದು ಕ್ಷೇತ್ರವನ್ನು ಹೊರತುಪಡಿಸಿ ಉಳಿದ ಮೂರರ ಪೈಕಿ ಒಂದರಲ್ಲಿ ಸ್ಪರ್ಧೆ ಮಾಡುತ್ತೇನೆ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಮೈಸೂರಿನಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ ನರಸಿಂಹರಾಜ ಬಿಟ್ಟು ಯಾವುದಾದರೂ ಒಂದು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನರಸಿಂಹರಾಜ ಕ್ಷೇತ್ರ ಬೇಡ ಯಾಕೆ ಎಂಬುದರ ಬಗ್ಗೆ ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದಂತೆ ಕಾಣಿಸುತ್ತಿಲ್ಲ.
Lawyer Jagadeesh: ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಅವಹೇಳನ- ಲಾಯರ್ ಜಗದೀಶ್ ವಿರುದ್ಧ FIR !!
Comments are closed.