Kalasa: ಧರ್ಮಸ್ಥಳ ಕೇಸ್ – ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಪೋಸ್ಟ್, ಆರೋಪಿ ಅರೆಸ್ಟ್!!

Kalasa: ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಮಾಸ್ಕ್ ಮ್ಯಾನ್ ದೂರು ನೀಡಿದ್ದು ಇದರ ಬೆನ್ನಲ್ಲೇ ಅಸ್ಥಿಪಂಜರ ಶೋಧ ಕಾರ್ಯಾಚರಣೆಯೂ ನಡೆಯುತ್ತಿದೆ. ಇದರ ಮಧ್ಯೆ ಜೈನ ಸಮುದಾಯದ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ಪೋಸ್ಟ್ ಮಾಡಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು, ಅಶ್ಲೀಲ ಕಮೆಂಟ ಹಾಕಿದ್ದ ಹೊಸಹಳ್ಳಿಯ ಉಮೇಶ್ ಎನ್ನುವ ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಅಜ್ಜಂಪುರ ಠಾಣೆ ಪೊಲೀಸ್ರಿಂದ ಉಮೇಶ್ ಬಂಧನವಾಗಿದೆ. ಉಮೇಶ್ ಗೌಡ್ಲರ್ ಎನ್ನುವವ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅಶ್ಲೀಲವಾಗಿ ಮೆಸೇಜ್ ಹಾಕಿದ್ದ. ಜೈನ ಸಮುದಾಯದ ಹೆಣ್ಣು ಮಕ್ಕಳ ಕುರಿತು ಅಶ್ಲೀಲವಾಗಿ ಕಮೆಂಟ್ ಬರೆದಿದ್ದ ಈ ವಿಚಾರವಾಗಿ ಕಳಸ ನಿವಾಸಿ ಪದ್ಮರಾಜಯ್ಯ ಎನ್ನುವವರು ಉಮೇಶ್ ವಿರುದ್ಧ ದೂರು ನೀಡಿದ್ದರು.
ಕಮೆಂಟ್ ಕುರಿತು ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ಬಿ.ಎನ್.ಎಸ್. ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಬಿ.ಎನ್.ಎಸ್. ಕಾಯ್ದೆಯ 196 (1) ಹಾಗೂ 353 (2) ಅಡಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಉಮೇಶ್ ಗೌಡನಿಗಾಗಿ ಹುಡುಕಾಡಿದ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ.
Udupi: ಇಂದು ಉಡುಪಿ ಶ್ರೀ ಕೃಷ್ಣ ಮಠದ ಜನ್ಮಾಷ್ಟಮಿ ಇಲ್ಲ!! ಕಾರಣ ಏನು?
Comments are closed.