Darshan: ಜೈಲಿಗೆ ಹೋಗುತ್ತಿದ್ದಂತೆ ನಟ ದರ್ಶನ್ ಗೆ ಮತ್ತೆ ಕಾಣಿಸಿಕೊಂಡ ಬೆನ್ನು ನೋವು!!

Share the Article

Darshan: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ದರ್ಶನ್ ಹಾಗೂ ಇತರ ಆರೋಪಿಗಳ ಜಾಮೀನನ್ನು ರದ್ದುಗೊಳಿಸಿದೆ. ಈ ಬೆನ್ನಲ್ಲೇ ಡಿ ಗ್ಯಾಂಗ್ ಮತ್ತೆ ಜೈಲು ಪಾಲಾಗಿದೆ. ಜೈಲಿಗೆ ಹೋಗುತ್ತಿದ್ದಂತೆ ಇದೀಗ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ.

ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ವಜಾಗೊಂಡ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಆತನ ಸಹಚರರಾದ ನಾಗರಾಜ್, ಲಕ್ಷ್ಮಣ್, ಮತ್ತು ಪ್ರದೋಶ್ ಇದೀಗ ಪರಪ್ಪನ ಅಗ್ರಹಾರ ಜೈಲಿನ ಅಡ್ಮಿಷನ್ ಕ್ವಾರಂಟೈನ್ ಬ್ಯಾರಕ್‌ನಲ್ಲಿ ಇದ್ದಾರೆ. ಆದರೆ, ಬೆನ್ನುನೋವಿನಿಂದ ಬಳಲುತ್ತಿರುವ ದರ್ಶನ್‌ಗೆ ಜೈಲಿನಲ್ಲಿ ನಿದ್ರೆಯೇ ಬಂದಿಲ್ಲ ಎಂದು ಸಹಚರರ ಬಳಿ ಅಳಲು ತೋಡಿಕೊಂಡಿದ್ದಾರೆ.

ರಾತ್ರಿಯ ಊಟದಲ್ಲಿ ದರ್ಶನ್ ಮತ್ತು ಗ್ಯಾಂಗ್‌ಗೆ ಮುದ್ದೆ, ಚಪಾತಿ, ಅನ್ನ, ಮತ್ತು ಸಾಂಬಾರ್ ನೀಡಲಾಗಿತ್ತು. ಊಟದ ನಂತರ ದರ್ಶನ್, ಲಕ್ಷ್ಮಣ್ ಮತ್ತು ನಾಗರಾಜ್ ಜೊತೆಗೆ ತಡರಾತ್ರಿಯವರೆಗೆ ಮಾತುಕತೆಯಲ್ಲಿ ತೊಡಗಿದ್ದರು. ‘ಹೀಗಾಯ್ತಲ್ಲ..’ ಎಂದು ದರ್ಶನ್ ತನ್ನ ಸಹಚರರೊಂದಿಗೆ ಚರ್ಚಿಸಿದ್ದಾರೆ.

Comments are closed.