Viral Video : ಸೆಕೆಂಡ್ ನಲ್ಲಿ ಮನೆ ಬೀಗ ಒಡೆಯುತ್ತಿದ್ದ ಕಳ್ಳ – ಈತನ ಟ್ರಿಕ್ಸ್ ಕಂಡು ಪೊಲೀಸರೇ ಶಾಕ್

Viral Video : ಮನೆಯನ್ನು ಕಳ್ಳತನ ಮಾಡುವ ಖದೀಮರು ಹೊಸ ಹೊಸ ಟ್ರಿಕ್ಸ್ ಗಳ ಜೊತೆ ದರೋಡೆಗೆ ಮುಂದಾಗುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಳ್ಳ ಕೇವಲ ಸೆಕೆಂಡ್ ಒಳಗೆ ಮನೆಯ ಬೀಗವನ್ನು ಮುರಿಯುತ್ತಿದ್ದು ಈತನ ಟ್ರಿಕ್ಸ್ ಕಂಡು ಪೊಲೀಸರೇ ಇದೀಗ ಶಾಕ್ ಆಗಿದ್ದಾರೆ.

ಹೌದು, ಮನೆಯ ಬೀಗವನ್ನು ಒಡೆಯಲು ಕಳ್ಳನ ಹೊಸತಂತ್ರದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಳ್ಳ ಹೇಗೆ ಕಳ್ಳತನ ಮಾಡುತ್ತಿದ್ದ ಎಂಬುದನ್ನು ತಿಳಿದ ಪೊಲೀಸರು ಕೂಡ ಒಂದು ಕ್ಷಣ ದಂಗಾಗಿದ್ದಾರೆ. ಈತನ ವಿಚಾರಣೆ ಬಳಿಕ ಆತ ತನ್ನ ಟ್ರಿಕ್ಸ್ ಅನ್ನು ಬಹಿರಂಗಪಡಿಸಿದ್ದಾನೆ. ಹಾಗಾದರೆ ಬೀಗ ಒಡೆಯಲು ಕಳ್ಳ ಮಾಡುತ್ತಿದ್ದ ಐಡಿಯಾ ಏನು?
ಕಳ್ಳ ಬಳಸುತ್ತಿದ್ದ ಟ್ರಿಕ್ಸ್ ಏನು?
ಬಾಗಿಲೊಂದಕ್ಕೆ ಬೀಗ ಹಾಕಿದ ಪೊಲೀಸರು ಕೀ ಇಲ್ಲದೇ ಬೀಗ ತೆಗೆಯುವಂತೆ ಕೇಳಿದ್ದಾರೆ. ಆಗ ಬಂತು ನೋಡಿ ಸಿರಿಂಜ್.. ಹೌದು ಪೆಟ್ರೋಲ್ ತುಂಬಿದ ಸಿರಿಂಜ್ ಅನ್ನು ಕಳ್ಳ ಈ ಬೀಗ ಒಡೆಯುವುದಕ್ಕೆ ಬಳಸುತ್ತಿದ್ದ. ಅದು ಹೇಗೆ ಅಂತಿರಾ? ಸಿರಿಂಜ್‌ನಲ್ಲಿ ಪೆಟ್ರೋಲ್ ತುಂಬಿದ ಈತ ಆ ಬೀಗದಲ್ಲಿ ಕೀ ಹಾಕುವುದಕ್ಕೆ ಇರುವ ತೂತಿನೊಳಗೆ ಇಂಜೆಕ್ಟ್ ಮಾಡ್ತಿದ್ದ. ಬಳಿಕ ಸಿಗರ್‌ಲೈಟ್‌ನಿಂದ ಬೆಂಕಿ ಕೊಡುತ್ತಿದ್ದ. ಇದಾದ ನಂತರ ಬೀಗವನ್ನು ಹಿಡಿದು ಎಳೆದರೆ ಬೀಗ ಕೀ ಇಲ್ಲದೇ ತನ್ನಿಂದ ತಾನೇ ತೆರೆದುಕೊಳ್ಳುತ್ತಿತ್ತು.
ಈ ವೇಳೆ ಅಚ್ಚರಿಗೊಂಡ ಪೊಲೀಸರು ಅದು ಹೇಗೆ ಅಷ್ಟು ಸುಲಭವಾಗಿ ಕಳಚಲು ಸಾಧ್ಯ ಎಂದು ಕಳ್ಳನನ್ನೇ ಕೇಳಿದ್ದಾರೆ. ಆಗ ಕಳ್ಳ ಬೀಗದೊಳಗೆ ಲಾಕ್ ಸ್ಟಕ್ ಆಗುವುದಕ್ಕೆ ಪ್ಲಾಸ್ಟಿಕ್‌ನಿಂದ ಮಾಡಿದ ತಡೆಯನ್ನು ಬಳಸಿರುತ್ತಾರೆ ಅದು ಬೆಂಕಿ ತಾಗುತ್ತಿದ್ದಂತೆ ಕರಗಿ ಹೋಗುವುದರಿಂದ ಬೀಗ ಸುಲಭವಾಗಿ ತೆರೆದುಕೊಳ್ಳುತ್ತದೆ ಎಂದಿದ್ದಾರೆ. ಕಳ್ಳನ ಈ ಮಾತು ಕೇಳಿ ಪೊಲೀಸರೇ ದಂಗಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳ್ಳತನ ತಲೆಗೆ ವಾವ್ ಅಂತಿದ್ದಾರೆ ನೆಟ್ಟಿಗರು.
https://www.instagram.com/reel/DNPP7uUTOPd/?igsh=MWVlZmlubjV2bzZteg==
Comments are closed.