Darshan: ದರ್ಶನ್ ಜಾಮೀನು ರದ್ದು: ವಕೀಲ ಚಿದಾನಂದ್ ಹೇಳಿದ್ದೇನು?!

Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನಟ ದರ್ಶನ್ (Actor Darshan) ಜಾಮೀನು ರದ್ದಾಗಿದ್ದು, ಕಾನೂನು ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ (Supreme Court) ಸಾರಿದೆ ಎಂದು ಸರ್ಕಾರದ ಪರ ವಕೀಲ ಚಿದಾನಂದ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಆವರಣದಲ್ಲಿ ವಕೀಲ ಚಿದಾನಂದ್ ಮಾತನಾಡಿದರು. ಈ ವೇಳೆ, ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸುವ ವೇಳೆ ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡೋದಿಲ್ಲ ಎಂದಿತ್ತು. ಈಗ ಸುದೀರ್ಘವಾಗಿ ಪರಿಶೀಲಿಸಿದ ನ್ಯಾಯಾಲಯ ಎಲ್ಲಾ ಆರೋಪಿಗಳ ಜಾಮೀನು ರದ್ದು ಮಾಡಿದೆ. ಇದು ಘೋರ ಕೃತ್ಯ ಎಸಗುವವರಿಗೆ ಇದು ದೊಡ್ಡ ಪಾಠ. ಇನ್ನೂ ಹೈಕೋರ್ಟ್ ಈ ಪ್ರಕರಣವನ್ನು ಕ್ಷಲ್ಲಕ ಎಂಬಂತೆ ನೋಡಿತ್ತು ಎಂದಿದ್ದಾರೆ.
ಈ ತೀರ್ಪಿನ ಪ್ರತಿಯನ್ನು ಎಲ್ಲಾ ರಾಜ್ಯಗಳಿಗೆ ಹಂಚುವಂತೆ ನ್ಯಾಯಾಲಯ ಹೇಳಿದೆ. ಯಾಕೆಂದರೆ, ಸುಪ್ರೀಂ ಕೋರ್ಟ್ ತೀರ್ಪು ದೇಶಕ್ಕೆ ಕಾನೂನಾಗಿದೆ. ಇನ್ನು ಜೈಲಿನಲ್ಲಿ ಮತ್ತೆ ಈ ಆರೋಪಿಗಳಿಗೆ ಐಷಾರಾಮಿ ವ್ಯವಸ್ಥೆ ನೀಡಿದ್ದು ಗಮನಕ್ಕೆ ಬಂದರೆ ಕಠಿಣ ಕ್ರಮದ ಎಚ್ಚರಿಕೆಯನ್ನೂ ನ್ಯಾಯಾಲಯ ನೀಡಿದೆ ಎಂದಿದ್ದಾರೆ.
ದರ್ಶನ್ ಬೆನ್ನು ನೋವು ಅಂತ ಜಾಮೀನು ಪಡೆದು, ಪರೀಕ್ಷೆ ಮಾಡಿಸಿಕೊಂಡ ಮಾರನೇ ದಿನವೇ ಪ್ರೀಮಿಯಮ್ ಶೋನಲ್ಲಿ 3 ಗಂಟೆ ಕೂತು ಸಿನಿಮಾ ನೋಡಿದ್ದಾರೆ. ಇದನ್ನೆಲ್ಲ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಕಾನೂನು ಎಲ್ಲರಿಗೂ ಒಂದೇ, ಅದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಈ ತೀರ್ಪು ಮೈಲಿಗಲ್ಲು ಎಂದಿದೆ.
Comments are closed.