Shilpa shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ವಿರುದ್ದ 60 ಕೋಟಿ ರೂ. ವಂಚನೆ ಆರೋಪ!

Shilpa shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ವಿರುದ್ಧ, ಮುಂಬೈ ಮೂಲದ

ಉದ್ಯಮಿಯೊಬ್ಬರಿಗೆ 60 ಕೋಟಿ ರೂ. ವಂಚನೆ ಮಾಡಿದ ಆರೋಪ ಕೇಳಿಬಂದಿದೆ.
ಈ ಪ್ರಕರಣವು ಸೆಲೆಬ್ರಿಟಿ ದಂಪತಿಗಳ ಈಗ ಕಾರ್ಯನಿರ್ವಹಿಸದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗಾಗಿ ಸಾಲ ಮತ್ತು ಹೂಡಿಕೆ ಒಪ್ಪಂದಕ್ಕೆ ಸಂಬಂಧಿಸಿದೆ. ಉದ್ಯಮಿ ದೀಪಕ್ ಕೊಠಾರಿ ಅವರು 2015-2023 ರ ಸುಮಾರಿಗೆ ವ್ಯವಹಾರ ವಿಸ್ತರಣೆಗಾಗಿ ತಮಗೆ 60.48 ಕೋಟಿ ರೂ.ಗಳನ್ನು ನೀಡಿದ್ದೆ. ಆದರೆ, ಅದನ್ನು ವೈಯಕ್ತಿಕ ವೆಚ್ಚಗಳಿಗೆ ಖರ್ಚು ಮಾಡಿಕೊಂಡಿದ್ದಾರೆ ಎಂದು ನಟಿ ಹಾಗೂ ಪತಿ ವಿರುದ್ಧ ಆರೋಪ ಮಾಡಿದ್ದಾರೆ.
ಆರ್ಯ ಕಂಪನಿಗೆ ವಾರ್ಷಿಕ ಶೇ.12 ರಷ್ಟು ಬಡ್ಡಿದರದಲ್ಲಿ 75 ಕೋಟಿ ರೂ. ಸಾಲ ಕೇಳಿದ್ದರು. ಆದರೆ, ಹೆಚ್ಚಿನ ತೆರಿಗೆಗಳನ್ನು ತಪ್ಪಿಸಲು ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸುವಂತೆ ಸೂಚಿಸಿದ್ದರು ಎಂದು ಉದ್ಯಮಿ ಆರೋಪಿಸಿದ್ದಾರೆ. ಸಭೆ ನಡೆಸಿ, ಹಣವನ್ನು ಸಮಯಕ್ಕೆ ಹಿಂದಿರುಗಿಸುವ ಭರವಸೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಕೊಠಾರಿ, 2015 ರ ಏಪ್ರಿಲ್‌ನಲ್ಲಿ ಮೊದಲ ಕಂತಿನ ಸುಮಾರು 31.95 ಕೋಟಿ ರೂ. ಕಳುಹಿಸಿದ್ದೆ. ಆದರೆ ತೆರಿಗೆ ಸಮಸ್ಯೆ ಹಾಗೆಯೇ ಉಳಿದು ಸೆಪ್ಟೆಂಬರ್‌ನಲ್ಲಿ ಎರಡನೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2015 ಮಾರ್ಚ್ ಮತ್ತು 2016 ರ ಮಾರ್ಚ್ ನಡುವೆ ಅವರು 28.54 ಕೋಟಿ ರೂ. ವರ್ಗಾಯಿಸಿಕೊಂಡಿದ್ದರೆಂದು ತಿಳಿಸಿದ್ದಾರೆ.
Asha Protest: ಸರ್ಕಾರದ ವಿರುದ್ದ ಸಿಡಿದೆದ್ದ ಆಶಾ ಕಾರ್ಯಕರ್ತೆಯರು – ಮೂರನೇ ದಿನಕ್ಕೆ ಕಾಲಿಟ್ಟ ಬೃಹತ್ ಪ್ರತಿಭಟನೆ
Comments are closed.