Dharmasthala Case: ಧರ್ಮಸ್ಥಳ ಪ್ರಕರಣದ ತನಿಖೆಯ ಬಗ್ಗೆ ಸದನದಲ್ಲಿ ಚರ್ಚೆ ಹಿನ್ನೆಲೆ – ಗೃಹ ಸಚಿವ ಭೇಟಿಯಾದ ಎಸ್ಐಟಿ ಮುಖ್ಯಸ್ಥ ಮೊಹಾಂತಿ

Share the Article

Dharmasthala Case: ಸದನದಲ್ಲಿ ಇನ್ನೂ ಕೆಲವೇ ಹೊತ್ತಿನಲ್ಲಿ ಧರ್ಮಸ್ಥಳದ ಶವಪತ್ತೆ ಕುರಿತು ಚರ್ಚೆ ಇರುವ ಹಿನ್ನೆಲೆ ಗೃಹ ಸಚಿವ ಪರಮೇಶ್ವರ್ ಅವರನ್ನು ಧರ್ಮಸ್ಥಳ ಕೇಸ್ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಭೇಟಿಯಾಗಿದ್ದಾರೆ. ಅಲ್ಲದೆ DGP ಸಲೀಂ ಜೊತೆಗೆ ಕೂಡ ಗೃಹ ಸಚಿವ ಡಾ.ಜಿ ಪರಮೇಶ್ವರ್ ಚರ್ಚೆ ನಡೆಸಿದ್ದಾರೆ.

ಆಪರೇಷನ್ ಅಸ್ಥಿಪಂಜರ ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಕುತೂಹಲ ಮೂಡಿದ್ದು, ವಿಧಾನಸೌಧದಲ್ಲಿರುವ ಗಹ ಸಚಿವ ಪರಮೇಶ್ವರ್ ವರ ಕೊಠಡಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅವರಿಂದ ಸಚಿವ ಡಾ.ಜಿ ಪರಮೇಶ್ವರ ಮಾಹಿತಿ ಪಡೆಯುತ್ತಿದ್ದಾರೆ.

ಧರ್ಮಸ್ಥಳ ಪ್ರಕರಣದ ತನಿಖೆಯ ಬಗ್ಗೆ ಚರ್ಚೆ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರಿಂದ ಇದೂವರೆಗಿನ ತನಿಖೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ತನಿಖೆ ಯಾವ ಹಂತದಲ್ಲಿದೆ, ಉತ್ಖನನ ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ ಮಾಡಿದ್ದು, ಎಸ್ಐಟಿ ಮುಖ್ಯಸ್ಥರ ಅಭಿಪ್ರಾಯವನ್ನು ಪರಮೇಶ್ವರ್ ಪಡೆದಿದ್ದಾರೆ.

ಈ ಬಗ್ಗೆ ಸಿಎಂ ಜೊತೆ ಕೂಡ ಪರಮೇಶ್ವರ್ ಚರ್ಚಿಸಲಿದ್ದು, ಈ ಬಗ್ಗೆ ಅಂತಿಮ ತೀರ್ಮಾನವನ್ನು ರಾಜ್ಯ ಸರ್ಕಾರ ಮಾಡಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯ ಆಡಳಿತ ಪಕ್ಷದ ಮೊಗಸಾಲೆ ಬಳಿ ಇರು ಸಿಎಂ ಕೊಠಡಿಯಲ್ಲಿ ಗೃಹ ಸಚಿವ ಪರಮೇಶ್ವರ್ ಸಿಎಂ ಅವರನ್ನು ಪರಮೇಶ್ವರ್ ಚರ್ಚಿಸುತ್ತಿದ್ದಾರೆ. ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರನ್ನು ಭೇಟಿಯಾದ ಬಳಿಕ ಸಿಎಂ ಅವರನ್ನು ಭೇಟಿಯಾಗಿ ಗೃಹಸಚಿವರು ಚರ್ಚೆ ನಡೆಸುತ್ತಿದ್ದಾರೆ.

Comments are closed.