Dharmasthala Case: ಧರ್ಮಸ್ಥಳ ದೇಗುಲಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ – ಪ್ರಧಾನಿ ಮೋದಿಗೆ ಪತ್ರ ಬರೆದ ಕಿಯೋನಿಕ್ಸ್ ನೌಕರರ ಸಂಘದ ಅಧ್ಯಕ್ಷ

Dharmasthala Case: ಧರ್ಮಸ್ಥಳದಲ್ಲಿ ಅನಾಥ ಶವಗಳ ಹೂತಿಟ್ಟ ಪ್ರಕರಣ ಇದೀಗ ಬೇರೆಯದೇ ತಿರುವು ಪಡೆದುಕೊಂಡಿದೆ. ಪ್ರಕರಣದ ಬಗ್ಗೆ ತನಿಖೆ ಮಾಡುವ ಬಗ್ಗೆ ಧ್ವನಿ ಎತ್ತುವ ಬದಲು ಹಲವರು ದೇವಸ್ಥಾನಕ್ಕೆ, ಕ್ಷೇತ್ರಕ್ಕೆ, ಹಿಂದೂ ಧರ್ಮಕ್ಕೆ ಅಪಚಾರವಾಗುತ್ತಿದೆ ಎಂದು ವಾದ ಮಾಡುತ್ತಿರುವವರೇ ಹೆಚ್ಚಾಗಿದ್ದಾರೆ. ಇದೀಗ ಧರ್ಮಸ್ಥಳ ದೇಗುಲಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ, ಹಿಂದುಗಳ ಶ್ರದ್ಧಾಕೇಂದ್ರದ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ಮೋದಿಗೆ ಕಿಯೋನಿಕ್ಸ್ ಅಧ್ಯಕ್ಷ ಜೆ ಬಂಗೇರ ಪತ್ರ ಬರೆದಿದ್ದಾರೆ.

ದೇಗುಲದ ಹೆಸರಿಗೆ ಉದ್ದೇಶಪೂರ್ವಕವಾಗಿ ಮಸಿ ಬಳಿಯುವ ಕೆಲ್ಸವಾಗುತ್ತಿದೆ. ಯ್ಯೂಟ್ಯೂಬ್ ವೆಬ್ ಸೈಟ್ ಗಳಲ್ಲಿ ಕ್ಷೇತ್ರದ ಬಗ್ಗೆ ಅವಹೇಳನಕಾರಿಯಾಗಿ ಮಾತಾನಾಡುತ್ತಿದ್ದಾರೆ. ಈ ಪ್ರಕರಣವನ್ನು NIA ಗೆ ವಹಿಸಿ. ದೇವಾಲಯದ ಶ್ರದ್ಧಾಕೇಂದ್ರದ ಪಾವಿತ್ರತ್ಯತೆ ಕಾಪಾಡಲು ಮಧ್ಯಸ್ಥಿಕೆ ವಹಿಸಿ ಎಂದು ಪ್ರಧಾನಿಗಳಿಗೆ ಬರೆದ ಪತ್ರದಲ್ಲಿ ಜೆ ಬಂಗೇರ ಉಲ್ಲೇಖಿಸಿದ್ದಾರೆ.
ಜೊತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ರಿಗೂ ಪತ್ರ ಬರೆದಿದ್ದು, ಈ ಹುನ್ನಾರದ ಹಿಂದೆ SDPI, PFI ಕೂಡ ಇದೆ. ಈ ಕೆಲಸಗಳಿಗೆ ಮತಾಂಧ ಶಕ್ತಿಗಳಿಂದ ಹಣ ಹರಿದು ಬರುತ್ತಿರಬಹುದು ಅಂತಾ ಪತ್ರದಲ್ಲಿ ಹೇಳಿದ್ದಾರೆ.
Pavitra Gowda: ಪವಿತ್ರ ಗೌಡ ಫೋಟೋವನ್ನು ಕೈಗೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ !! ಅದರ ಕೆಳಗೆ ಬರೆಸಿದ್ದೇನು ಗೊತ್ತಾ?
Comments are closed.