Bengaluru : ಕೆಂಪು ಕಲ್ಲು ವಿಚಾರ – ವಿಧಾನಸಭೆಯಲ್ಲಿ ಸಿಡಿದೆದ್ದ ಕರಾವಳಿ ಶಾಸಕರು

Bengaluru : ಕರಾವಳಿ ಭಾಗದಲ್ಲಿ ಕೆಂಪು ಕಲ್ಲು ವಿಚಾರವಾಗಿ ಭಾರಿ ಚರ್ಚೆಯಾಗುತ್ತಿದೆ. ಈ ಕುರಿತು ಪೊಲೀಸರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರ ಇದೇ ವಿಧಾನಸಭೆಯಲ್ಲೂ ಕೂಡ ಸದ್ದು ಮಾಡಿದ್ದು, ಕರಾವಳಿ ಶಾಸಕರು ಸಿಡಿದೆದಿದ್ದಾರೆ.

ಹೌದು, ಜಿಲ್ಲೆಯಲ್ಲಿ ಉಂಟಾಗಿರುವ ಕೆಂಪುಕಲ್ಲು ಹಾಗೂ ಮರಳಿನ ತೀವ್ರ ಸಮಸ್ಯೆ ಬಗ್ಗೆ ಅಧಿವೇಶನದಲ್ಲಿ ಶಾಸಕ ವೇದವ್ಯಾಸ ಕಾಮತ್ ಅರವರು ಸರ್ಕಾರದ ಗಮನ ಸೆಳೆದರು. ಬಿಜೆಪಿ ಹಿರಿಯ ಶಾಸಕ ಸುನಿಲ್ ಕುಮಾರ್ ಅವರ ಮಾತಿಗೆ ಧ್ವನಿಗೂಡಿಸಿದರು.
ಈ ಕುರಿತಾಗಿ ಸದನದಲ್ಲಿ ಅಬ್ಬರಿಸಿದ ಶಾಸಕರುಗಳು ಗಣಿ ಇಲಾಖೆಯ ಅಧಿಕಾರಿಗಳು ಮಂಗಳೂರಿನ ವಸ್ತುಸ್ಥಿತಿ ಅರಿಯದೇ ಬೆಂಗಳೂರಿನಲ್ಲಿ ಕೂತು ಕಾನೂನು ರೂಪಿಸಿದರೆ ಇನ್ನಷ್ಟು ಗೊಂದಲಗಳೇ ಹೆಚ್ಚುವುದಲ್ಲದೇ ಪರಿಹಾರ ಸಿಗುವುದಿಲ್ಲ. ಎಲ್ಲಾ ಅಧಿಕಾರಿಗಳು ಮಂಗಳೂರಿಗೆ ಬಂದು ವಾಸ್ತವ ಅಂಶಗಳನ್ನು ತಿಳಿದುಕೊಂಡು ನೀತಿ ನಿಯಮ ರೂಪಿಸುವಂತಾಗಲಿ ಎಂದರು.
ಅಲ್ಲದೆ ಜನಪ್ರತಿನಿಧಿಗಳಾದ ನಮ್ಮನ್ನು ಆಹ್ವಾನಿಸದೇ ಈ ಬಗ್ಗೆ ಎರಡು ಮೂರು ಸಭೆಗಳನ್ನು ನಡೆಸಲಾಗಿದೆ. ಕಲ್ಲುಗಳನ್ನು ತೆಗೆಯುವಾಗ ಎಷ್ಟು ಜಾಗಗಳನ್ನು ಲೀಸ್ ಗೆ ಪಡೆಯಲಾಗುತ್ತದೆ, ಅದರಿಂದ ಎಷ್ಟು ಕಲ್ಲು ಉತ್ಪಾದಿಸಲಾಗುತ್ತದೆ, ಅಲ್ಲಿರುವ ಸಮಸ್ಯೆಗಳೇನು, ಹೀಗೆ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾನೂನು ರೂಪಿಸಬೇಕಾಗುತ್ತದೆ. ಜಿಲ್ಲೆಯಲ್ಲಿ ಎಲ್ಲಾ ಕಟ್ಟಡ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಅದಕ್ಕೆ ಪೂರಕವಾಗಿ ಹೊಂದಿಕೊಂಡಂತಹ ಆರ್ಥಿಕ ವ್ಯವಸ್ಥೆಯೂ ಹದಗೆಟ್ಟಿದೆ. ಕೂಲಿ ಕಾರ್ಮಿಕರ ಸ್ಥಿತಿಯಂತೂ ಹೇಳ ತೀರದಾಗಿದೆ. ದಯವಿಟ್ಟು ಕೂಡಲೇ ಈ ಬಗ್ಗೆ ಸೂಕ್ತ ಕ್ರಕೈಗೊಂಡು ನಮ್ಮ ಜಿಲ್ಲೆಯ ಜನತೆಗೆ ಅನುಕೂಲ ಮಾಡಿಕೊಡಿ ಎಂದು ಶಾಸಕರು ಆಗ್ರಹಿಸಿದರು.
Shivamogga : ದೇವಸ್ಥಾನದಲ್ಲಿ ಮಗುವಿಗೆ ಜನ್ಮ ನೀಡಿದ ‘ಅವಿವಾಹಿತ ಮಹಿಳೆ’ !!
Comments are closed.