Gentle man: ಪತಿದೇವರು ಅಂದ್ರೆ ಇವರೆ ನೋಡಿ! ಗರ್ಭಿಣಿ ಪತ್ನಿಯನ್ನು ನೋಡಿಕೊಳ್ಳಲು 1.2 ಕೋಟಿ ಸಂಬಳದ ಕೆಲಸ ಬಿಟ್ಟ ವ್ಯಕ್ತಿ

Share the Article

Gentle man: ತನ್ನ ಗರ್ಭಿಣಿ ಪ್ತನಿಯನ್ನು ನೋಡಿಕೊಳ್ಳವ ಸಲುವಾಗಿ ಹೆಚ್ಚಿನ ಸಂಬಳದ ಕೆಲಸವನ್ನು ತೊರೆದಿದ್ದೇನೆ ಎಂದು ವ್ಯಕ್ತಿಯೊಬ್ಬ ರೆಡ್ಡಿಟ್ ಪೋಸ್ಟ್ ನಲ್ಲಿ ಮಾಡಿರುವ ಪೋಸ್ಟ್‌ ಅನೇಕರನ್ನು ಕುತೂಹಲ ಕೆರಳಿಸಿದೆ. ಮನೆಯಿಂದ ಕೆಲಸ ಮಾಡುವಾಗ ತನಗೆ ₹ 1.2 ಕೋಟಿ ಸಂಬಳ ಸಿಕ್ಕಿತು. ಆದರೆ ಹೆಂಡತಿಯ ಗರ್ಭಧಾರಣೆಯ ಸಮಯದಲ್ಲಿ ಅವರೊಂದಿಗೆ ಇರಲು ಕೆಲಸವನ್ನು ತ್ಯಜಿಸಲು ನಿರ್ಧರಿಸಿದೆ ಎಂದು ಆ ವ್ಯಕ್ತಿ ಹೇಳಿದ್ದಾರೆ.

ಆ ವ್ಯಕ್ತಿ, “ಜೀವನದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ” ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರರು ‘ಗಂಡನ ಗುರಿಗಳು!’ ಎಂದು ಹೇಳಿದರೆ, ಹೆಚ್ಚಿನ ಜನರು ಆ ವ್ಯಕ್ತಿಯನ್ನು ಅಭಿನಂದಿಸಿ, ಕೆಲಸ ಬಿಡುವ ಅವರ ನಿರ್ಧಾರವನ್ನು ಮೆಚ್ಚಿಕೊಂಡರೆ, ಎಲ್ಲರೂ ಈ ನಿರ್ಧಾರ ತೆಗೆದುಕೊಳ್ಳಲು ಶಕ್ತರಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಪೋಸ್ಟ್‌ನ ಶೀರ್ಷಿಕೆ ಹೀಗಿದೆ, ಗರ್ಭಾವಸ್ಥೆಯಲ್ಲಿ ನನ್ನ ಹೆಂಡತಿಯನ್ನು ಪೋಷಿಸಲು ನನ್ನ 1 ಕೋಟಿ + ಕೆಲಸವನ್ನು ಬಿಟ್ಟೆ. ಈ ಸಂಧರ್ಭದಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸಲು ಮತ್ತು ತನ್ನ ವೃತ್ತಿಜೀವನವನ್ನು ಬದಲಾಯಿಸಲು ನಿರ್ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. “ಇಂದು ನಾನು ನಿಜವಾಗಿಯೂ ಧನ್ಯನಾಗಿದ್ದೇನೆ, ನಾನು 1 ಕೋಟಿ + ಉದ್ಯೋಗವನ್ನು ಬಿಡಲು ಶಕ್ತನಾಗಿದ್ದೇನೆ ಮತ್ತು ನನ್ನ ಸಂಪರ್ಕಗಳು ಮತ್ತು ಅನುಭವದೊಂದಿಗೆ ನಾನು ಯಾವುದೇ ಸಮಯದಲ್ಲಿ ಮಾರುಕಟ್ಟೆಗೆ ಮರಳಬಹುದು ಎಂದು ನನಗೆ ತಿಳಿದಿದೆ.”

ಜೀವನದಲ್ಲಿ, “ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಕಾಣಿಸಿಕೊಳ್ಳುವುದು” ಅತ್ಯಂತ ಮುಖ್ಯ ಎಂದು ಹೇಳುವ ಮೂಲಕ ಅವರು ಪೋಸ್ಟ್ ಅನ್ನು ಮುಕ್ತಾಯಗೊಳಿಸಿದ್ದಾರೆ.

ಅವರು ತಮ್ಮ ಜೀವನದ ಬಗ್ಗೆ ಕೆಲವು ಮಾತುಗಳನ್ನು ಹಂಚಿಕೊಂಡರು. “ನನ್ನ ಬಗ್ಗೆ: ಕಾಲೇಜು ಬಿಟ್ಟಿದ್ದು, ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡುವ ಮೂಲಕ 7 ವರ್ಷಗಳಲ್ಲಿ 0 ರಿಂದ 7 ಕೋಟಿ+ ಗೆ ಏರಿದೆ, ಹೆಚ್ಚಾಗಿ GTM ತಂಡಗಳನ್ನು ನಿರ್ಮಿಸುವುದು ಮತ್ತು ಮುನ್ನಡೆಸುವುದು ನನ್ನ ಕೆಲಸ.

Weather report: ಕರ್ನಾಟಕ ಹವಾಮಾನ ವರದಿ – ರಾಜ್ಯದ ಬಹುತೇಕ ಕಡೆ ಮಳೆ ಸಾಧ್ಯತೆ

Comments are closed.