Suicide: ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು: ತೂಕ ಹೆಚ್ಚಾಗಿ ಪ್ರೇಯಸಿ ಪಾರು, ಪ್ರಿಯಕರ ಸಾವು

Share the Article

Suicide: ಪ್ರೇಮಿಗಳಿಬ್ಬರು ಮದುವೆಗೆ ಕುಟುಂಬದವರು ಒಪ್ಪದ ಕಾರಣ ಅಪ್ರಾಪ್ತ ವಯಸ್ಕ ಯುವತಿ ಹಾಗೂ ಆಕೆಯ ಪ್ರಿಯಕರ ಆತ್ಮಹತ್ಯೆಗೆ ಯತ್ನಿಸಿದ್ದು ಈ ವೇಳೆ ಪ್ರೇಯಸಿ ಪಾರಾಗಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಟ್ಟಡ ಕಾರ್ಮಿಕನಾಗಿದ್ದ ಸೂರಜ ಕಿರಣ ಕಡಲೋಕರ ಉರ್ಫ ಭಜಂತ್ರಿ (27) ಎಂಬಾತನು ಮೃತಪಟ್ಟಿದ್ದು ಈತನಿಗೆ ತಂದೆ ತಾಯಿ ಇಲ್ಲದ ಕಾರಣ ಮನೆಯಲ್ಲೇ ಒಬ್ಬನೇ ವಾಸಿಸುತ್ತಿದ್ದ. ಇತ್ತೀಚಿಗೆ ಅನ್ಯಕೋಮಿನ ಯುವತಿಯನ್ನು ಪ್ರೀತಿಸುತ್ತಿದ್ದು ಆಕೆಯ ಮನೆಯವರು ನಿರಾಕರಿಸಿದ ಕಾರಣ ಇಬ್ಬರೂ ಆತ್ಮಹತ್ಯೆಗೆ ನಿರ್ಧರಿಸಿ ರುಕ್ಕಿಣಿ ನಗರದ ಮನೆಯಲ್ಲಿ ಒಂದೇ ಸೀರೆಗೆ ಇಬ್ಬರು ನೇಣು ಬಿಗಿದುಕೊಂಡಿದ್ದರು.

ಆದ್ರೆ ಯುವತಿಯ ತೂಕ ಹೆಚ್ಚಾಗಿದ್ದರಿಂದ ಭಾರಕ್ಕೆ ಕಾಲುಗಳು ನೆಲಕ್ಕೆ ತಾಗಿದ್ದು ಹೀಗಾಗಿ ಯುವಕ ಮತ್ತಷ್ಟು ಮೇಲೆ ಹೋಗಿ ಕುತ್ತಿಗೆ ಬಿಗಿಯಾಗಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

Election commission: ಚುನಾವಣಾ ಆಯೋಗದಿಂದ ರಾಹುಲ್ ಗಾಂಧಿಗೆ ನೋಟೀಸ್ ಜಾರಿ – ಸಿಎಂ, ಡಿಸಿಎಂ‌ ಏನಂದ್ರು?

Comments are closed.