Dharmasthala case: ಪರಿಷತ್ ನ ಶೂನ್ಯ ವೇಳೆಯಲ್ಲಿ ಧರ್ಮಸ್ಥಳ ಪ್ರಕರಣ ಪ್ರಸ್ತಾಪ – ಸೂಕ್ತ ಉತ್ತರ ನೀಡದ ಸರ್ಕಾರ

Dharmasthala case: ಪರಿಷತ್ ನ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಡಿ ಎಸ್ ಅರುಣ್ ಧರ್ಮಸ್ಥಳ ಪ್ರಕರಣ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ ಶೂನ್ಯ ವೇಳೆಯಲ್ಲಿ ಈ ಪ್ರಕರಣವನ್ನು ಪ್ರಸ್ತಾಪ ಮಾಡಿದರೂ ಸರ್ಕಾರದಿಂದ ಸೂಕ್ತ ಉತ್ತರ ಸಿಗದ ಹಿನ್ನೆಲೆ, ಧರ್ಮಸ್ಥಳ ಪ್ರಕರಣವನ್ನು ಬೇರೆಯದೇ ರೂಪದಲ್ಲಿ ಪ್ರಸ್ತಾಪ ಮಾಡಲು ಬಿಜೆಪಿ ಸಿದ್ದತೆ ಮಾಡಿಕೊಂಡಿದೆ.

ಇದಕ್ಕೆ ಸಂಬಂಧಿಸಿದ ಸಚಿವರಿಂದ ಸೂಕ್ತ ಉತ್ತರ ಕೊಡಿಸಲಾಗುವುದು ಎಂದಷ್ಟೆ ಸಭಾ ನಾಯಕ ಬೋಸರಾಜು ಅವರಿಂದ ಉತ್ತರ ಸಿಕ್ಕಿತ್ತು. ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡುವ ವಿಚಾರಗಳಿಗೆ ಸರ್ಕಾರದ ಉತ್ತರ ಸಮರ್ಪಕವಾಗಿ ಸಿಗುವುದಿಲ್ಲ. ಹಾಗಾಗಿ ಇದೀಗ ಪರಿಷತ್ ನಲ್ಲಿ ಈ ವಿಚಾರವನ್ನು ಮತ್ತೊಂದು ರೂಪದಲ್ಲಿ ಪ್ರಸ್ತಾಪ ಮಾಡಿ ಸರ್ಕಾರದ ಮೇಲೆ ಒತ್ತಡ ಹೇರಲು ಬಿಜೆಪಿ ಸಿದ್ದತೆ ಮಾಡಿದೆ. ರಾಜ್ಯದ ಧಾರ್ಮಿಕ ಸ್ಥಳವಾದ ಧರ್ಮಸ್ಥಳ ಲಕ್ಷಾಂತರ ಹಿಂದೂಗಳ ಶ್ರದ್ದಾ ಕೇಂದ್ರವಾಗಿದೆ ಎಂದು ಅರುಣ್ ಹೇಳಿದರು.
ಇತ್ತೀಚಿಗೆ ಅನಾಮಿಕ ವ್ಯಕ್ತಿಯೊಬ್ಬ ಸಾಕ್ಷಿ ಇಲ್ಲದೇ ಆರೋಪ ಮಾಡಿ ಸಾಕಷ್ಟು ಮಾದ್ಯಮಗಳಲ್ಲಿ ಕೂಡಾ ಈ ವಿಚಾರ ಪ್ರಸ್ತಾಪ ಆಗಿದೆ. ಸರ್ಕಾರ ಆದಷ್ಟು ಬೇಗ ಇದನ್ನು ತನಿಖೆ ಮಾಡಿ ಆರೋಪದ ಹಿಂದಿನ ನಿಜಸ್ವರೂಪವನ್ನು ಬಹಿರಂಗ ಮಾಡಲಿ. ತನಿಖೆಯ ಪ್ರಗತಿಯ ಬಗ್ಗೆ ವರದಿಯನ್ನು ಸಾರ್ವಜನಿಕ ರಿಗೆ ಬಹಿರಂಗ ಮಾಡಬೇಕು ಎಂದು ಆಗ್ರಹ ಪಡಿಸಲು ಬಿಜೆಪಿ ಸಿದ್ದತೆ ಮಾಡಿಕೊಂಡಿದೆ.Pramod Muthalik : ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಮದುವೆ – ಯತ್ನಾಳ್ 5ಲಕ್ಷ ಕೊಟ್ರೆ, ನಾವು ಮದುವೆ ಮಾಡಿಸಿ ಕೆಲಸ ಕೊಡ್ತೀವಿ ಎಂದ ಮುತಾಲಿಕ್!!
Comments are closed.