Dharmasthala Case: ಧರ್ಮಸ್ಥಳ ಬುರುಡೆ ಪ್ರಕರಣ: ಪಾಯಿಂಟ್‌ ನಂ.16, ಬಾಹುಬಲಿ ಇರುವ ರತ್ನಗಿರಿ ಬೆಟ್ಟದ ಕೆಳಗೆ ಶೋಧ

Share the Article

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಬಾಹುಬಲಿ ಮೂರ್ತಿಯನ್ನು ಸ್ಥಾಪಿಸಿರುವ ರತ್ನಗಿರಿ ಬೆಟ್ಟದ ಬುಡದಲ್ಲಿ ಸ್ಪಾಟ್‌ ನಂ.16 ಎಂದು ಗುರುತು ಮಾಡಲಾಗಿದ್ದು, ಶೋಧ ಕಾರ್ಯಾಚರಣೆ ನಡೆಯಲಿದೆ.

ಶೋಧ ಕಾರ್ಯಾಚರಣೆಯಲ್ಲಿ ಬಿಗಿ ಪೊಲೀಸ್‌ ಭದ್ರತೆ ಮಾಡಲಾಗಿದ್ದು, ಕೂಲಿ ಕೃಮಿಕರು ಅಗತ್ಯ ಸಲಕರಣೆಗಳ ಜೊತೆ ಸ್ಥಳಕ್ಕೆ ಬಂದಿದ್ದು, ಅಧಿಕಾರಿಗಳಿಗೆ ಕುರ್ಚಿ, ಕುಡಿಯುವ ನೀರು ಮತ್ತು ಉಪ್ಪಿನ ಚೀಲಗಳನ್ನು ಸಿಬ್ಬಂದಿ ತಂದು ನೀಡಿದ್ದಾರೆ. ಗಿಡ ಗಂಟೆಗಳನ್ನು ಸಿಬ್ಬಂದಿ ಶೋಧ ನಡೆಯುವ ಜಾಗದಲ್ಲಿ ಸ್ವಚ್ಛ ಮಾಡಲಾಗುತ್ತಿದ್ದು, ಪೊಲೀಸರು ರೆಡ್‌ಟೇಪ್‌ ಹಾಕಿದ್ದಾರೆ.

ಸ್ಥಳದಲ್ಲಿ ಎಸಿ, ತಹಶೀಲ್ದಾರ್‌ ಮತ್ತು ತನಿಖಾ ಅಧಿಕಾರಿಗಳು ಹಾಜರಿದ್ದು, ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸ್ಥಳದ ಸುತ್ತಮುತ್ತ ಹಸಿರು ಬಣ್ಣದ ಶೇಡ್‌ ನೆಟ್‌ಗಳನ್ನು ಅಳವಡಿಸುವ ಮೂಲಕ ಸಂಪೂರ್ಣ ಪ್ರದೇಶ ಕಾಣದ ಹಾಗೆ ಮುಚ್ಚಿದ್ದಾರೆ. ಪಾಯಿಂಟ್‌ ನಂ.16 ರಲ್ಲಿ ಅನಾಮಿಕ ನೀಡುತ್ತಿರುವ ಹೇಳಿಕೆಯನ್ನು ಅಧಿಕಾರಿಗಳು ದಾಖಲು ಮಾಡುತ್ತಿದ್ದಾರೆ. ವಿಡಿಯೋ ಕ್ಯಾಮೆರಾದಲ್ಲಿ ಹೇಳಿಕೆ ದಾಖಲಾಗುತ್ತಿದೆ. ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Kantara: ಕಾಂತಾರ ಚಿತ್ರದಲ್ಲಿ ರಿಷಭ್ ಶೆಟ್ಟಿ ಓಡಿಸಿದ್ದ ಅಪ್ಪು ಕೋಣ ಇನ್ನಿಲ್ಲ!

Comments are closed.