Dharmasthala Case: ಯೂಟ್ಯೂಬರ್ಸ್‌ ಮೇಲೆ ಹಲ್ಲೆ ಪ್ರಕರಣ – ಸಿಎಂ, ಗೃಹ ಸಚಿವ ಪರಮೇಶ್ವರ್ ಏನ್‌ ಹೇಳಿದ್ರು?

Share the Article

Dharmasthala Case: ಧರ್ಮಸ್ಥಳ ಗಲಾಟೆ ವಿಚಾರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಪ್ಪು ಯಾರೇ ಮಾಡಿದ್ರು ತಪ್ಪೇ. ಕಾನೂನು ರೀತಿ ಕ್ರಮ ಆಗುತ್ತೆ ಎಂದು ಉತ್ತರಿಸಿದರು.

ಇದೇ ವೇಳೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ತನಿಖೆಯ ಬಗ್ಗೆ ಯಾರ್ಯಾರು ಏನು ಹೇಳಿಕೆ ಕೊಡುತ್ತಾರೆ ಅದು ಮುಖ್ಯ ಅಲ್ಲ, ನಮಗೆ ಎಸ್ಐಟಿಯವರು ತನಿಖೆಯನ್ನು ತಾಂತ್ರಿಕವಾಗಿ ಆಧುನಿಕವಾಗಿ ಸತ್ಯ ಹೊರಗೆ ಬರುವ ರೀತಿಯಲ್ಲಿ ಮಾಡಬೇಕು. ಇದನ್ನೇ ನಾವು ಎಸ್ಐಟಿಗೆ ಹೇಳಿರೋದು. ತನಿಖೆ ಪ್ರಶ್ನೆ ಮಾಡೋದನ್ನು ಮಾಡಿದರೆ ಅದಕ್ಕೆ ಅರ್ಥ ಇಲ್ಲ. ಎಸ್ಐಟಿ ಅವರಿಗೆ ನಾವು ಜವಾಬ್ದಾರಿ ಕೊಟ್ಟಿದ್ದೇವೆ ಎಂದರು.

ಎಸ್ಐಟಿ ಸರಿಯಾಗಿ ಮಾಡುತ್ತಿದೆ ಅಂತಾನೂ ಹೇಳ್ತಿದ್ದಾರೆ ಹೋರಾಟಗಾರರು, ಎಸ್‌ಐಟಿ ಅವರು ಸರಿಯಾಗಿ ಮಾಡ್ಲಿಲ್ಲ ಅಂತನೂ ಹೇಳುತ್ತಾರೆ. ರೇಡಾರ್ ತರಬೇಕಿತ್ತು ಅಂತ ಇವರೇ ಹೇಳ್ತಾರೆ. ನಾವೇ ತನಿಖೆ ಹೇಗಾಗಬೇಕು ಅಂತ ಹೇಳೋಕೆ ಶುರು ಮಾಡಿದ್ರೆ ಹೇಗೆ? ಅವರ ಹೇಳಿದ ಹಾಗೆ ತನಿಖೆ ಮಾಡೋಕಾಗುತ್ತಾ? ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಸಮರ್ಥರಿದ್ದಾರೆ ಅವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಮತ್ತಷ್ಟು ಉತ್ಖನನ ನಡೆಯುತ್ತಾ ಎಂಬ ವಿಚಾರ ಕೇಳಿದ್ದಕ್ಕೆ ಅದನ್ನ ಎಸ್ಐಟಿ ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾವು ಮಧ್ಯಪ್ರವೇಶ ಮಾಡಲ್ಲ. ದೂರುದಾರ ಹೇಳೋದ್ರಲ್ಲಿ ಸತ್ಯ ಇದೆ ನೋಡಬೇಕು ಅಂದ್ರೆ ನೋಡ್ತಾರೆ. ಇದು ಅನುಮಾನಾಸ್ಪದವಾಗಿದ್ದರೆ ಅವರನ್ನೇ ಕೇಳ್ತಾರೆ. ಏನಪ್ಪಾ ಈ ರೀತಿ ಹೇಳ್ತಿದ್ಯಲ್ಲ ಸರಿಯಾಗಿ ಹೇಳು ಅಂತ. ಈ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ದೇಶನವನ್ನು ಕೊಡುವುದಿಲ್ಲ ಎಂದರು.

ಇದನ್ನೂ ಓದಿ: Puttur: ಪುತ್ತೂರು: ತೋಡಿನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ: ಗಂಡನ ಅಣ್ಣ ನಾಪತ್ತೆ!!

Comments are closed.