Murder: ಮಹಿಳೆ ಕುತ್ತಿಗೆ ಕುಯ್ದು ಕೊ*ಲೆ – ಆರೋಪಿ ನೇಣಿಗೆ ಶರಣು

Share the Article

Murder: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯನ್ನ ಕೊಂದ ಬಳಿಕ ಆರೋಪಿ ನೇಣಿಗೆ ಶರಣಾದ ಘಟನೆ ಹೆಬ್ಬಗೋಡಿ ಸಮೀಪದ ತಿರುಪಾಳ್ಯದಲ್ಲಿ ನಡೆದಿದೆ. ಪತಿ ಸ್ನೇಹಿತನಿಂದಲೇ ಮಹಿಳೆಯ ಕೊಲೆಯಾಗಿದ್ದು, ಮಂದಿರ ಮಂಡಲ್(27) ಕೊಲೆಯಾದ ಮಹಿಳೆ ಹಾಗೂ ಸುಮನ್ ಮಂಡಲ್(28) ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗುತ್ತಿದೆ.

ಮಹಿಳೆ ಎಂಟು ವರ್ಷದ ಹಿಂದೆ ಬಿಜೋನ್ ಮಂಡಲ್ ಎಂಬಾತನ ಜೊತೆ ವಿವಾಹವಾಗಿದ್ದು, ದಂಪತಿಗೆ ಆರು ವರ್ಷದ ಗಂಡು ಮಗು ಇದೆ. ಎರಡು ವರ್ಷಗಳಿಂದ ಪತಿ-ಪತ್ನಿ ಬೇರ್ಪಟ್ಟಿದ್ದರು. ತಿರುಪಾಳ್ಯದ ಬಾಡಿಗೆ ಮನೆಯಲ್ಲಿ ಮಂದಿರ ವಾಸವಿದ್ದಳು. ಕಳೆದ ಒಂದು ವರ್ಷದ ಹಿಂದೆ ಕೊಲೆಯಾದ ಮಹಿಳೆ ಪತಿಯ ಸ್ನೇಹಿತ ಸುಮನ್ ಮಂಡಲ್ ಹಾಗೂ ಬಿಜೋನ್ ಮಂಡಲ್ ಕೆಲಸಕ್ಕಾಗಿ ಇಬ್ಬರು ಅಂಡಮಾನ್ಗೆ ತೆರಳಿದ್ದರು. ಕಳೆದ ಹದಿನೈದು ದಿನಗಳ ಹಿಂದೆ ಸುಮನ್ ಮಂಡಲ್ ವಾಪಸ್ ಆಗಿದ್ದ.

ನಿನ್ನೇ ಸಂಜೆ ಮಂದಿರ ಮಂಡಲ್ ಮನೆಗೆ ಹೋಗಿದ್ದ ವೇಳೆ ಗಲಾಟೆ ನಡೆದು ಮಂದಿರ ಮಂಡಲ್ ನ್ನು ಮನೆಯಲ್ಲಿದ್ದ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ತದನಂತರ ರೂಮ್ ನಲ್ಲಿ ನೇಣು ಬಿಗಿದುಕೊಂಡು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಸ್ಥಳಕ್ಕೆ ಹೆಬ್ಬಗೋಡಿ ಪೊಲೀಸರ ಭೇಟಿ ನೀಡಿ ಮೃತದೇಹಗಳನ್ನ ರವಾನಿಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: KSRTC Protest: ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರಿಗೆ ವಜಾ ಗ್ಯಾರಂಟಿ ಸ್ಕೀಂ – ಮರುಕಳಿಸುತ್ತಾ 2021ರಲ್ಲಿ ನಡೆದಿದ್ದ ಮುಷ್ಕರದ ನೋಟೀಸ್

Comments are closed.