UP: ಪ್ರವಾಹ ಸಂತ್ರಸ್ತರಿಗೆ ‘ಗಂಗಾ ಮಾತೆ ನಿಮ್ಮ ಪಾದ ತೊಳೆಯಲು ಬಂದಿದ್ದಾಳೆ, ನೀವು ನೇರವಾಗಿ ಸ್ವರ್ಗಕ್ಕೆ ಹೋಗುವಿರಿ’ ಎಂದ ಸಚಿವ – ನೀವು ಇಲ್ಲಿಯೇ ಇದ್ದು ಆಶೀರ್ವಾದ ಪಡೆಯಿರಿ ಎಂದ ಮಹಿಳೆ

UP: ಉತ್ತರ ಭಾರತದ ಹಲವಡೆ ಮಳೆಯಿಂದಾಗಿ ಪ್ರವಾಹಗಳು ಉಂಟಾಗುತ್ತಿವೆ. ಮೇಘ ಸ್ಫೋಟಗಳು ಸಂಭವಿಸುತ್ತಿವೆ. ಅಂತೆಯೇ ಉತ್ತರ ಪ್ರದೇಶದ ಕಾನ್ಪುರ ಗ್ರಾಮಾಂತರ ಜಿಲ್ಲೆಯ ಭೋಗಿನಿಪುರದಲ್ಲೂ ಪ್ರವಾಹ ಉಂಟಾಗಿದೆ.

ಈ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಉತ್ತರ ಪ್ರದೇಶ ಸಚಿವ ಸಂಜಯ ನಿಶಾದ್ ಅವರು ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ನೀಡುವುದು ಅಥವಾ ರಕ್ಷಣೆಯ ಭರವಸೆ ನೀಡುವುದು ಬಿಟ್ಟು ಗಂಗಾ ಮಾತೆ ನಿಮ್ಮ ಪಾದ ತೊಳೆಯಲೆಂದೇ ಬಂದಿದ್ದಾಳೆ. ಮಾತೆಯ ದರ್ಶನ ಮಾತ್ರದಿಂದ ನೀವು ನೇರವಾಗಿ ಸ್ವರ್ಗಕ್ಕೆ ಹೋಗುವಿರಿ. ಆದರೆ, ವಿರೋಧ ಪಕ್ಷಗಳ ನಾಯಕರು ನಿಮಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿ ದಿಗ್ಭ್ರಮೆಗೊಳಿಸಿದ್ದಾರೆ. ಒಬ್ಬ ಜವಾಬ್ದಾರಿಯುತ ಸಚಿವನ ಬಾಯಿಂದ ಬರುವಂತಹ ಮಾತ ಇದು ಎಂಬುದಾಗಿ ಜನ ಪ್ರಶ್ನೆ ಮಾಡುತ್ತಿದ್ದಾರೆ.
ಪ್ರವಾಹದಿಂದಾಗಿ ನಮ್ಮ ಮನೆಗಳು ನಾಶವಾಗಿವೆ. ಎಲ್ಲಿಗೆ ಹೋಗಬೇಕು ಎಂಬುದು ತಿಳಿಯದೆ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ದೂರಿದ ಸಂತ್ರಸ್ತರನ್ನು ಉದ್ದೇಶಿಸಿ ಅವರು ಈ ಮಾತು ಹೇಳಿದ್ದಾರೆ. ಇದಕ್ಕೆ ಇದೇ ವೇಳೆ ಅಲ್ಲಿದ್ದ ಮಹಿಳೆ ನೀವು ಇಲ್ಲಿಯೇ ಇದ್ದು ಆಶೀರ್ವಾದ ಪಡೆಯಿರಿ ಎಂದಿದ್ದಾರೆ.
ಇದನ್ನು ಓದಿ: KSRTC: ಸಾರಿಗೆ ನೌಕರರ ಮುಷ್ಕರ ಸರ್ಕಾರಕ್ಕೆ ಲಾಭ – ‘ಶಕ್ತಿ ಯೋಜನೆ’ ಇಲ್ಲದೆ 15 ಕೋ.ರೂ. ಉಳಿತಾಯ!
Comments are closed.