Ghorakpura: ಹೋಟೆಲ್ ನಲ್ಲಿ ಬಿಲ್ ಕಟ್ಟುವುದನ್ನು ತಪ್ಪಿಸಲು ಪ್ಲಾನ್- ವೆಜ್ ಬಿರಿಯಾನಿಯಲ್ಲಿ ಮೂಳೆಯನ್ನು ಇರಿಸಿದ ವ್ಯಕ್ತಿ !

Share the Article

Ghorakpura : ಇತ್ತೀಚಿನ ದಿನಗಳಲ್ಲಿ ಆರ್ಡರ್ ಮಾಡಿದ ಸಸ್ಯಹಾರಿ ಆಹಾರ ಪದಾರ್ಥಗಳಲ್ಲಿ ಮಾಂಸಾಹಾರಿಯ ತುಂಡುಗಳು ಕಂಡುಬರುತ್ತಿರುವ ಘಟನೆಗಳನ್ನು ಕಾಣಬಹುದು. ಈ ಕುರಿತು ಸಾಕಷ್ಟು ವಿವಾದಗಳು ಕೂಡ ಆಗಾಗ ಆಗುತ್ತಿರುತ್ತವೆ. ಆದರೆ ಇಲ್ಲೊಬ್ಬ ಆಸಾಮಿ ಹೋಟೆಲ್ಗೆ ಹೋಗಿ, ಹೊಟ್ಟೆ ತುಂಬಾ ತಿಂದು, ತೇಗಿ ಬಿಲ್ ಕೊಡುವುದನ್ನು ತಪ್ಪಿಸಲು ವೆಜ್ ಬಿರಿಯಾನಿ ಒಳಗಡೆ ಮೂಳೆ ಇಟ್ಟು ಸಿಕ್ಕಿಬಿದ್ದಿದ್ದಾನೆ.

ಹೌದು, ಎಂಟರಿಂದ ಹತ್ತು ಜನರ ಗುಂಪು ರೆಸ್ಟೋರೆಂಟ್ ಗೆ ಹೋಗಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಬಿರಿಯಾನಿ ಎರಡನ್ನೂ ಆರ್ಡರ್ ಮಾಡಿತು. ಅವರ ಆಹಾರವನ್ನು ಬಡಿಸಿದ ಸ್ವಲ್ಪ ಸಮಯದ ನಂತರ, ಪುರುಷರಲ್ಲಿ ಒಬ್ಬರು ತಮಗೆ ನೀಡಿದ ಬಿರಿಯಾನಿಯಲ್ಲಿ ಮೂಳೆ ಇದೆ ಎಂದು ಕಿರುಚಿದ್ದಾನೆ. ಬಳಿಕ ಹೋಟೆಲ್ ಮಾಲೀಕ ಅವರನ್ನು ಶಾಂತ ಗೊಳಿಸಲು ಪೊಲೀಸರನ್ನು ಕರೆಸಿ, ತನಿಖೆ ನಡೆಸಿದ್ದಾರೆ. ಈ ವೇಳೆ ಸಿಸಿ ಕ್ಯಾಮೆರಾದಲ್ಲಿ ಇವರ ಕೈಚಳಕ ಕಂಡು ಬಂದಿದೆ.

ಸಿಸಿಟಿವಿಯಲ್ಲಿ ಏನಿದೆ?

ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪುರುಷರಲ್ಲಿ ಒಬ್ಬರು ಇನ್ನೊಬ್ಬರಿಗೆ ಮೂಳೆಯನ್ನು ಹಸ್ತಾಂತರಿಸುವುದನ್ನು ತೋರಿಸುತ್ತದೆ, ನಂತರ ಅವರು ಅದನ್ನು ರಹಸ್ಯವಾಗಿ ವೆಜ್ ಬಿರಿಯಾನಿ ತಟ್ಟೆಯಲ್ಲಿ ಇಡುತ್ತಾರೆ.

ಯುವಕರು ಬುದ್ಧಿವಂತಿಕೆಯಿಂದ ಮೂಳೆಯನ್ನು ವೆಜ್ ಬಿರಿಯಾನಿಯಲ್ಲಿ ಇರಿಸಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕ ರವಿಕರ್ ಸಿಂಗ್ ದೃಢಪಡಿಸಿದ್ದಾರೆ.

ಇದನ್ನು ಓದಿ: J&K Governor Satyapal Malik Dies: ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್ ಸತ್ಯಪಾಲ್ ಮಲಿಕ್ (79) ನಿಧನ

Comments are closed.