Home News Dharmasthala Case: ಪಾಯಿಂಟ್‌ 6 ರಲ್ಲಿ ದೊರಕಿದ ಅಸ್ಥಿಪಂಜರದ ಅವಶೇಷ FSLಗೆ ರವಾನಿಸದ SIT: ಕಾರಣವೇನು?

Dharmasthala Case: ಪಾಯಿಂಟ್‌ 6 ರಲ್ಲಿ ದೊರಕಿದ ಅಸ್ಥಿಪಂಜರದ ಅವಶೇಷ FSLಗೆ ರವಾನಿಸದ SIT: ಕಾರಣವೇನು?

Hindu neighbor gifts plot of land

Hindu neighbour gifts land to Muslim journalist

Dharmasthala Case: ಧರ್ಮಸ್ಥಳ ಬುರುಡೆ ರಹಸ್ಯ ಕುತೂಹಲದ ಘಟ್ಟ ಏರಿದೆ. ನೇತ್ರಾವತಿ ಸ್ನಾನ ಘಟ್ಟದ ಸುತ್ತಮುತ್ತಲಿನ ಕಾಡು ಪ್ರದೇಶದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ಆರೋಪ ಮಾಡಿರುವ ಮಾಸ್ಕ್‌ ಮ್ಯಾನ್‌ ಗುರುತು ಮಾಡಿದ 13 ಪಾಯಿಂಟ್‌ಗಳಲ್ಲಿ ಪಾಯಿಂಟ್‌ 6 ರಲ್ಲಿ ನಿನ್ನೆ ಉತ್ಖನನದ ಸಮಯದಲ್ಲಿ ಕಳೇಬರದ ಅವಶೇಷಗಳು ಪತ್ತೆಯಾಗಿದೆ. ಇವು ಇನ್ನೂ ಕೂಡಾ ಎಸ್‌ಐಟಿ ವಶದಲ್ಲಿ ಇದೆ ಎಂದು ವರದಿಯಾಗಿದೆ.

ನಿನ್ನೆ ಸಿಕ್ಕ ಅಸ್ಥಿಪಂಜರದ ಅವಶೇಷಗಳನ್ನು ಫಾರೆನ್ಸಿಕ್ ವಿಶ್ಲೇಷಣೆಗಾಗಿ ಬೆಂಗಳೂರಿನ ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್)ಗೆ ರವಾನಿಸುವ ಸಿದ್ಧತೆ ನಡೆಯುತ್ತಿರುವುದಾಗಿ ವರದಿಯಾಗಿದೆ. ಇಂದು ಮತ್ತು ನಾಳೆ ಇತರ ಗುರುತಿಸಲಾದ ಸ್ಥಳಗಳಲ್ಲಿ ಉತ್ಖನನ ನಡೆಸಲಾಗುವುದು. ಈ ಸಂದರ್ಭ ಯಾವುದೇ ಹೆಚ್ಚಿನ ಅವಶೇಷಗಳು ಸಿಕ್ಕಿದ್ದೇ ಆದಲ್ಲಿ, ಅವುಗಳನ್ನೂ ಸೇರಿಸಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ ಎಂದು ನ್ಯೂಸ್‌ 18 ವರದಿ ಮಾಡಿದೆ.

ಇದನ್ನೂ ಓದಿ: Dharmasthala Case: ಧರ್ಮಸ್ಥಳ ತಲೆಬುರುಡೆ ಪ್ರಕರಣ: ಪಾಯಿಂಟ್‌ ನಂ.1 ರಲ್ಲಿ ದೊರೆತ ಡೆಬಿಟ್‌, ಪಾನ್‌ಕಾರ್ಡ್‌ ವಾರಸುದಾರರು ಪತ್ತೆ