CRIB discovered: ಮಹಿಳೆ ಒಬ್ಬರಲ್ಲಿ ವಿಶ್ವದಲ್ಲೇ ಎಲ್ಲೂ ಇಲ್ಲದ ರಕ್ತದ ಗುಂಪು ಪತ್ತೆ!

Share the Article

CRIB discovered: ಈ ಮೊದಲು ಎಲ್ಲೂ ಗುರುತಿಸಲಾಗದ, ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಜಾಗತಿಕವಾಗಿ ಹೊಸ ರಕ್ತದ ಗುಂಪು ಪತ್ತೆಯಾಗಿದೆ. ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರ ಹಾಗೂ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯದ ಸಂಶೋಧನೆಯಿಂದ ಈ ಅಪರೂಪದ ‘ಸಿಆರ್‌ಐಬಿ’ ಗುಂಪು ಬೆಳಕಿಗೆ ಬಂದಿದೆ.

ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಪ್ರಯತ್ನದಿಂದಾಗಿ ಹೊಸ ಗುಂಪು ಗುರುತಿಸಲಾಗಿದೆ. ಯುಕೆ ಬ್ರಿಸ್ಟಲ್‌ನಲ್ಲಿರುವ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖಿತ ಪ್ರಯೋಗಾಲಯ (ಐಬಿಜಿಆರ್‌ಎಲ್) ಈ ಹೊಸ ರಕ್ತದ ಗುಂಪನ್ನು ಪತ್ತೆ ಹೆಚ್ಚಿದೆ. ರಕ್ತಕಣಗಳನ್ನು 10 ತಿಂಗಳ ವ್ಯಾಪಕ ಸಂಶೋಧನೆಗೆ ಒಳಪಡಿಸಿದ ಬಳಿಕ ಈ ಹೊಸ ಪ್ರತಿಜನಕವು ಕ್ರೋಮರ್ (ಸಿಆರ್) ರಕ್ತದ ಗುಂಪು ವ್ಯವಸ್ಥೆಯ ಭಾಗವಾಗಿರುವುದು ತಿಳಿದುಬಂದಿದೆ. ಇದರ ಮೂಲವನ್ನು ಗುರುತಿಸಿ ಈ ರಕ್ತದ ಗುಂಪಿಗೆ ಅಧಿಕೃತವಾಗಿ ‘CRIB’ ಎಂದು ಹೆಸರಿಡಲಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ 38 ವರ್ಷದ ಕೋಲಾರದ ಮಹಿಳೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಾಖಲಾಗಿದ್ದರು. ಹೆಚ್ಚಿನ ಪರೀಕ್ಷೆಗಾಗಿ ಮಹಿಳೆಯ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆರೆನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.

ಮಹಿಳೆಯ ರಕ್ತವು ‘ಪ್ಯಾನ್ರಿಯಾಕ್ಟಿವ್’ ಅಂದರೆ ಅವರ ರಕ್ತವು ಯಾವುದೇ ಮಾದರಿ ಜೊತೆಗೆ ಹೊಂದಾಣಿಕೆ ಆಗುತ್ತಿಲ್ಲ ಎಂಬುದು ತಿಳಿಯಿತು ಎಂದು ವರದಿ ಬಂದಿದ್ದಾಗಿ ರಕ್ತ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಅಂಕಿತ್ ಮಾಥುರ್ ತಿಳಿಸಿದ್ದಾರೆ. ಕೊನೆಗೆ ಆಕೆಗೆ ರಕ್ತ ನೀಡದೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.

ಇದನ್ನೂ ಓದಿ: GPR: : ಧರ್ಮಸ್ಥಳದಲ್ಲಿ ಶವಗಳ ಪತ್ತೆಗೆ GPR ತಂತ್ರಜ್ಞಾನ ಬಳಕೆ? ಬುರುಡೆ ರಹಸ್ಯ ಬಯಲಾಗಲು ಕ್ಷಣಗಣನೆ !!

Comments are closed.