Dharmasthala Case: ಧರ್ಮಸ್ಥಳ ತಲೆಬುರುಡೆ ಕೇಸ್: 5ನೇ ಪಾಯಿಂಟ್‌ನಲ್ಲೂ ಸಿಗದ ಕಳೇಬರ

Dharmasthala Case: ನೇತ್ರಾವತಿ ನದಿ ತೀರದಲ್ಲಿ ನೂರಾರು ಅಸ್ಥಿಪಂಜರವನ್ನು ಹುಗಿಯಲಾಗಿದೆ ಎನ್ನುವ ಕೇಸ್ ವಿಷಯಕ್ಕೆ ಸಂಬಂಧಪಟ್ಟಂತೆ ಐದನೇ ಪಾಯಿಂಟ್ ಸ್ಥಳದಲ್ಲಿಯೂ ಕಳೇಬರ ದೊರಕ್ಕಿಲ್ಲ ಎನ್ನಲಾಗಿದೆ.

ಮಾಸ್ಕ್ ಮ್ಯಾನ್ ತಾನು ಈಗಾಗಲೇ ನೂರಾರು ಶವಗಳನ್ನು ನೇತ್ರಾವತಿ ನದಿ ತೀರದಲ್ಲಿ ಹೂತು ಹಾಕಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದು, ಅದರಂತೆ ಉತ್ಖನನ ಕಾರ್ಯ ನಿನ್ನೆಯಿಂದ ನಡೆಯುತ್ತಿತ್ತು. 1,2,3,4 ನೇ ಪಾಯಿಂಟ್ ಜಾಗದಲ್ಲಿ ಎಸ್‌ಐಟಿ ಟೀಂ ಹುಡುಕಾಡಿದ್ದು, ಎಲ್ಲೂ ಅಸ್ಥಿಪಂಜರ, ತಲೆಬುರುಡೆ ದೊರಕಿಲ್ಲ. ಇದೀಗ 5ನೇ ಪಾಯಿಂಟ್‌ನಲ್ಲಿಯೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ ಇದರೊಂದಿಗೆ ಇಂದಿನ ಕಾರ್ಯಾಚರಣೆಯನ್ನು ಸದ್ಯಕ್ಕೆ ಎಸ್‌ಐಟಿ ಸ್ಥಗಿತ ಮಾಡಿದೆ.
Comments are closed.